ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್
ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್
ರಾಯಚೂರು, ಮಾ.7- ಪ್ರಧಾನಿ ನರೇಂದ್ರ ಮೋದಿ ಅವರು ಮಾ.12 ರಂದು ಕಲಬುರಗಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲ್ ಸಂಚಾರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಲಹಾ ಸಮತಿ ಸದಸ್ಯ ಹಾಗೂ ಸಮಾಜ ಸೇವಕ ಡಾ. ಬಾಬುರಾವ ಅವರು ತಿಳಿಸಿದ್ದಾರೆ . ಬಹು ನಿರೀಕ್ಷಿತ ವಂದೇ ಭಾರತ್ ರೈಲು ಸಂಚಾರ ಕಲ್ಯಾಣ ಕರ್ನಾಟಕ ಭಾಗದ ದಶಕಗಳ ಬೇಡಿಕೆ ಈಗ ನನಸಾಗಿದೆ. ಈ ಭಾಗದಲ್ಲಿ ವಂದೇ ಭಾರತ್ ರೈಲು ಸಂಚಾರ ಮಾಡಬೇಕು ಎಂಬುದು ಜನರ ಕೂಗಿನ ಮೇರೆಗೆ ಕೇಂದ್ರ ರೈಲ್ವೆ ಸಚಿವ ಅವರು ಅನುಮೋದನೆ ನೀಡಿ ಜನರ ಬೇಡಿಕೆ ಸ್ಪಂದಿಸಿದ್ದಾರೆ ಎಂದರು. ವಂದೇ ಭಾರತ್ ರೈಲ್ ಸಂಚಾರ ಅವಕಾಶ ಕಲ್ಪಿಸಬೇಕು ಎಂದು ನಾನು ಜನರ ಸಲಹಾ ಸೂಚನೆಯಂತೆ ಅನೇಕ ಭಾರಿ ಕೇಂದ್ರ ಸಚಿವರಿಗೆ ಮತ್ತು ಸಂಸದ ರಾಜ ಅಮರೇಶ ನಾಯಕ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದೇನೆ ಎಂದರು. ನನ್ನ ಸುದೀರ್ಘ ಪ್ರಯತ್ನದ ಫಲ ನಿರೀಕ್ಷೆಯಂತೆ ಕೊನೆಗೂ ಈ ಭಾಗದಲ್ಲಿ ವಂದೇ ಭಾರತ್ ರೈಲ್ ಸಂಚಾರ ಗ್ರೀನ್ ಸಿಗ್ನಲ್ ದೊರೆತಿದೆ. ಕಲ್ಯಾಣ ಕರ್ನಾಟಕ ಭಾಗದ ಮತ್ತು ಜಿಲ್ಲೆಯ ಜನರಿಗೆಅನುಕೂಲಕಾರವಾಗಲಿದೆ ಎಂದರು.
ಬೇಡಿಕೆಗೆ ಸ್ಪಂದಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ರೈಲಿಗೆ ಅನುಮೋದನೆ ನೀಡಿದ್ದು, ಪ್ರಧಾನಿಯವರು ಉದ್ಘಾಟಿಸಲಿರುವ ವಿವಿಧ ಕಾರ್ಯಕ್ರಮಗಳ ಪಟ್ಟಿಯಲ್ಲಿ ವಂದೇ ಭಾರತ್ ಸಹ ಇದೆ ಎಂದರು.
ಕೇಂದ್ರ ಸಚಿವ ಮತ್ತು ಸಂಸದ ರಾಜ ಅಮರೇಶ ನಾಯಕ ಹಾಗೂ ಉಮ್ಮೇಶ ಜಾದವ್ ಡಾ. ಬಾಬುರಾವ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Comments
Post a Comment