ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

 


ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ:

ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ರಾಯಚೂರು,ಮಾ‌‌.2- ಒಪೆಕ್ ಆಸ್ಪತ್ರೆ ಬಲವರ್ಧನೆ ಹಾಗೂ ಹೆಚ್ಚಿನ ಚಿಕಿತ್ಸಾ ಸೌಲಭ್ಯಕ್ಕಾಗಿ ಸತ್ಯ ಸಾಯಿ ಫೌಂಡೇಶನ್ ನ ಡಾ. ಸತೀಶ ಬಾಬು ಅವರ ನೇತೃತ್ವದ ತಂಡ ಆಸ್ಪತ್ರೆಯ ಸೌಲಭ್ಯಗಳನ್ನು ಹಾಗೂ ವೈದ್ಯಕೀಯ ಸೇವೆಗಳನ್ನು ಪರಿಶೀಲಿಸಿ  ಒಪೆಕ್ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು.


ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು  ಮನವಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಆದೇಶದ  ಮೇರೆಗೆ, ರಾಯಚೂರಿನ ಒಪೆಕ್ ಆಸ್ಪತ್ರೆಗೆ ಭೇಟಿ ನೀಡಿದ ಸತ್ಯ ಸಾಯಿ ಫೌಂಡೇಶನ್ ತಂಡ, ಸರ್ಕಾರಿ ಒಪೆಕ್ ಆಸ್ಪತ್ರೆಯ ಹೆಚ್ಚಿನ ಸೌಲಭ್ಯಕ್ಕಾಗಿ ಸಾಧ್ಯಸಾಧ್ಯತೆಗಳ ಕುರಿತು ವೀಕ್ಷಿಸಿ  ನಮ್ಮ ಸತ್ಯ ಸಾಯಿ ಟ್ರಸ್ಟ್  ಸರ್ಕಾರದ ಸಹಬಾಗಿತ್ವದಲ್ಲಿ ಈ ಭಾಗಕ್ಕೆ  ಉನ್ನತ ಮಟ್ಟದ ವೈದ್ಯಕೀಯ ಸೇವೆ ನೀಡುವ ಉದ್ದೇಶ ನಮ್ಮದಾಗಿದೆ ಎಂದರು‌

ಒಪೆಕ್ ಆಸ್ಪತ್ರೆಯನ್ನು ಸರ್ಕಾರಿ ಸಹಬಾಗಿತ್ವದಲ್ಲಿ ನವೀರಕರಣದ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಈ ಭೇಟಿಯಿಂದ ಆಸ್ಪತ್ರೆಯ ಪ್ರಾಥಮಿಕ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ನೀಡಲಾಗುವುದು. ಸರ್ಕಾರದ ಮಾಹಿತಿಯ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.


1970 ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆ ಅನೇಕ ಕಡೆಗಳಲ್ಲಿ ಶೈಕ್ಷಣಿಕ ವೈದ್ಯಕೀಯ ಸೇವೆ ಬಲವರ್ಧನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿಯೂ ಅವಕಾಶ ನೀಡಿದರೆ ಒಪೆಕ್ ಆಸ್ಪತ್ರೆ ಬಲವರ್ಧನೆಗಾಗಿ ಅಗತ್ಯ ಕ್ರಮ ಕೈಗೊಂಡು ಈ ಭಾಗದ ಜನರಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ನೀಡುವ ಇದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು, ರಿಮ್ಸ್ ಆಸ್ಪತ್ರೆಯ ಡೀನ್ ಡಾ.  ರಮೇಶ್, ನಾಗರಾಜ್ ಗದ್ವಾಲ್, ಒಪೆಕ್ ಆಸ್ಪತ್ರೆ ಆಡಳಿತ ಮಂಡಳಿ ಅಧಿಕಾರಿಗಳು, ವೈದ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Comments

Popular posts from this blog

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ