ಜಿಲ್ಲಾಡಳಿತದಿಂದ ಆದಿ ಗುರು ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ: ಯುವ ಪೀಳಿಗೆ ಶಂಕರಾಚಾರ್ಯರ ಬಗ್ಗೆ ಅರಿತುಕೊಳ್ಳಬೇಕು- ದತ್ತಾತ್ರೇಯ ಜೋಷಿ. ಜಯಧ್ವಜ ನ್ಯೂಸ್ ರಾಯಚೂರು,ಮೇ.2- ಇಂದಿನ ಯುವ ಪೀಳಿಗೆ ಆದಿ ಗುರು ಶ್ರೀ ಶಂಕರಾಚಾರ್ಯರ ಬಗ್ಗೆ ಅರಿತುಕೊಳ್ಳಬೇಕು ಎಂದು ದತ್ತಾತ್ರೇಯ ಪಂಡಿತ ಜೋಷಿ ಹೇಳಿದರು. ಅವರಿಂದು ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಮಾತನಾಡಿದರು.
8ನೇ ಶತಮಾನದಲ್ಲಿ ವೈದಿಕ ಪರಂಪರೆ ಹಾಗೂ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ದೇಶಾದ್ಯಂತ ಕಾಲ್ನಡಿಗೆಯಲ್ಲಿ ನಡೆದು ದೇಶದ ನಾಲ್ಕು ದಿಕ್ಕಿನಲ್ಲಿ ಚತುರಾಮ್ನಾಯ ಶಂಕರ ಮಠ ಸ್ಥಾಪಿಸಿ ಹಿಂದೂ ಧರ್ಮದ ಸಂರಕ್ಷಕರಾದರು ಎಂದು ಅಭಿಪ್ರಾಯ ಪಟ್ಟರು. ತಮ್ಮ ಪಾಂಡಿತ್ಯದ ಮೂಲಕ ಸಾಮಾನ್ಯ ಜನರಿಗೆ ವೈದಿಕ ಪರಂಪರೆ ಹಿಂದುತ್ವದ ಬಗ್ಗೆ ತಿಳಿಹೇಳಿದರು ಎಂದರು. ಅದ್ವೈತ ಸಿದ್ಧಾಂತ ಮೂಲಕ ಜಗತ್ತಿಗೆ ಬೆಳೆಕಾದರು ಪ್ರಪ್ರಥಮ ಜಗದ್ಗುರು ಆದಿಗುರುಗಳಾದರು ಎಂದರು. ನಾವೆಲ್ಲರೂ ಶ್ರೀ ಶಂಕರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣವೆಂದರು.
ಅತಿಥಿಗಳಾಗಿ ಆಗಮಿಸಿದ ಶ್ರೀ ಶಂಕರ ಮಠದ ಕೃಷ್ಣಮೂರ್ತಿ ಹೆಬಸೂರು ಮಾತನಾಡಿ ಸರ್ಕಾರದಿಂದ ಆಯೋಜನೆ ಗೊಂಡಿರುವ ಶಂಕರ ಜಯಂತಿ ಕಾರ್ಯಕ್ರಮ ಶಾಲಾ ಕಾಲೇಜು,ಸರ್ಕಾರಿ ಕಛೇರಿಗಳಲ್ಲಿಯೂ ಆಚರಣೆ ಕಡ್ಡಾಯವಾಗಿ ಆಯೋಜಿಸಲು ಜಿಲ್ಲಾಡಳಿತ ನಿರ್ದೇಶನ ನೀಡಬೇಕೆಂದರು.
ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಷಿ ಮಾತನಾಡಿ ಶಂಕರಾಚಾರ್ಯರ ಕೊಡುಗೆ ಭಾರತ ದೇಶಕ್ಕೆ ಅಪಾರವಾಗಿದೆ ದೇಶದ ಭೂಪಟವಿಲ್ಲದ ಸಮಯದಲ್ಲೂ ದೇಶದ ನಾಲ್ಕು ದಿಕ್ಕಿನಲ್ಲಿ ಸನಾತನ ಹಿಂದೂ ಧರ್ಮದವರನ್ನು ಒಗ್ಗೂಡಿಸಲು ಮತ್ತು ವೈದಿಕ ಪರಂಪರೆ ಉಳಿಸಿ ಬೆಳೆಸಲು ಶ್ರಮಿಸಿ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಅವರು ಸಾಕ್ಷಾತ್ ಶಿವನ ಅವತಾರವೆಂದು ಅನೇಕರು ಪೂಜಿಸುತ್ತಾರೆ ಅದು ಅತಿಶಯೋಕ್ತಿಯಲ್ಲವೆಂದರು.
ಶ್ರೀ ಶಂಕರಾಚಾರ್ಯರು ಇಡಿ ಮನುಕುಲಕ್ಕೆ ಸೀಮಿತ ಅವರನ್ನು ಒಂದೆ ಸಮುದಾಯ ಹಾಗೂ ಮತಕ್ಕೆ ಸೀಮಿತಗೊಳಿಸಬಾರದೆಂದರು.
ವೇದಿಕೆ ಮೇಲೆ ಜಿಲ್ಲಾಧಿಕಾರಿಗಳ ಕಛೇರಿ ಅಧಿಕಾರಿಗಳಾದ ಪರಶುರಾಮ್, ಶಂಕರ ಸೇವಾ ಸಮಿತಿಯ ಹನುಮಂತರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ, ಬ್ರಾಹ್ಮಣ ಸಮಾಜದ ಮುಖಂಡರಾದ ಡಾ.ಆನಂದತೀರ್ಥ ಫಡ್ನವೀಸ್, ಬಿ.ಕೆ.ದೇಸಾಯಿ, ಮುಖ್ಯಶಿಕ್ಷಕ ದಂಡಪ್ಪ ಬಿರಾದರ್ ಇತರರು ಇದ್ದರು. ಸರ್ವರನ್ನು ದಂಡಪ್ಪ ಬಿರಾದಾರ್ ಸ್ವಾಗತಿಸಿದರು. ನಾಡಗೀತೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಮುರಳಿಧರ್ ಕುಲಕರ್ಣಿ ನಿರೂಪಿಸಿದರು. ಶಂಕರ ಭಜನಾ ಮಂಡಳಿ ಸದಸ್ಯರು ಭಜನೆ ಗೈದರು.
ಭವ್ಯ ಶೋಭಾಯಾತ್ರೆ: ಬೆಳಿಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರಂಗಮಂದಿರವರೆಗೆ ಶ್ರೀ ಶಂಕರಾಚಾರ್ಯರ ಭಾವಚಿತ್ರದ ಶೋಭಾಯಾತ್ರೆಗೆ ತಹಸೀಲ್ದಾರರಾದ ಸುರೇಶ್ ವರ್ಮಾ ಚಾಲನೆ ನೀಡಿದರು.







Comments
Post a Comment