ಏ.1 ರಂದು ಪ್ರಧಾನಿ ಮೋದಿಯವರ ಪರೀಕ್ಷೆ ಪೆ ಚರ್ಚಾ ಕೇಂದ್ರೀಯ ವಿದ್ಯಾಲಯದಲಿ ನೇರ ಪ್ರಸಾರ ಆಯೋಜನೆ- ರಜನಿಕಾಂತ್.
ಏ.1 ರಂದು ಪ್ರಧಾನಿ ಮೋದಿಯವರ ಪರೀಕ್ಷೆ ಪೆ ಚರ್ಚಾ ಕೇಂದ್ರೀಯ ವಿದ್ಯಾಲಯದಲಿ ನೇರ ಪ್ರಸಾರ ಆಯೋಜನೆ- ರಜನಿಕಾಂತ್. ರಾಯಚೂರು,ಮಾ.29-ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಏ.1 ರಂದು ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೆ ಚರ್ಚಾ ಸಂವಾದದ ನೇರ ಪ್ರಸಾರ ಆಯೋಜಿಸಲಾಗಿದೆ ಎಂದು ಸಹಾಯಕ ಆಯುಕ್ತ ರಜನಿಕಾಂತ ಹೇಳಿದರು. ಅವರಿಂದು ಸಹಾಯಕ ಆಯುಕ್ತರ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಭಯ ನಿವಾರಣೆ ಮಾಡಲು ಅವರಿಗೆ ಸ್ಥೈರ್ಯ ತುಂಬಲು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಮೋದಿಯವರು ಸತತ ನಾಲ್ಕು ವರ್ಷದಿಂದ ಮಾಡುತ್ತಿದ್ದು ಇದು ಐದನೆ ಆವೃತ್ತಿಯಾಗಿದೆ ಎಂದರು. ಅಂದು ಬೆಳಿಗ್ಗೆ 11 ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಶಿಕ್ಷಕರು, ಪಾಲಕರು ಪಾಲ್ಗೊಳ್ಳಬಹುದೆಂದ ಅವರು ದೂರದರ್ಶನ ಸೇರಿದಂತೆ ಇನ್ನಿತರ ಖಾಸಗಿ ವಾಹಿನಿಗಳಲ್ಲೂ ಕಾರ್ಯಕ್ರಮ ಪ್ರಸಾರವಾಗಲಿದ್ದು ಮೈ ಜಿಓವಿ ಅಡಿ ನೋಂದಾಯಿತ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ರಾಜ್ಯದ ಕೆಲ ಆಯ್ದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
Comments
Post a Comment