ವಿದ್ಯೆಯ ಜೊತೆಗೆ ವಿವಿಧ ಅನುಕೂಲ ಮಾಡಿಕೊಟ್ಟಿರುವುದು ಸಿದ್ಧಾರ್ಥ ಸಂಸ್ಥೆಯ ಹೆಗ್ಗಳಿಕೆ- ದೊಡ್ಡಬಸಪ್ಪಗೌಡ ಭೋಗಾವತಿ
ವಿದ್ಯೆಯ ಜೊತೆಗೆ ವಿವಿಧ ಅನುಕೂಲ ಮಾಡಿಕೊಟ್ಟಿರುವುದು ಸಿದ್ಧಾರ್ಥ ಸಂಸ್ಥೆಯ ಹೆಗ್ಗಳಿಕೆ- ದೊಡ್ಡಬಸಪ್ಪಗೌಡ ಭೋಗಾವತಿ
ಮಾನ್ವಿ, ಮಾ.28- ಸಿದ್ಧಾರ್ಥ ವಿದ್ಯಾ ಸಂಸ್ಥೆ ಮಕ್ಕಳಿಗೆ ವಿದ್ಯೆ ನೀಡುವುದರ ಜೊತೆಗೆ ವಿವಿಧ ಅನುಕೂಲಗಳನ್ನು ಮಾಡಿಕೊಟ್ಟಿರುವುದು ಅದರ ಹೆಗ್ಗಳಿಕೆಯಾಗಿದೆ ಎಂದು ರಾಯಚೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಭೋಗಾವತಿ ಅವರು ಹರ್ಷ ವ್ಯಕ್ತಪಡಿಸಿದರು.
ರವಿವಾರ ಪಟ್ಟಣದ ಸಿದ್ಧಾರ್ಥ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ೯ನೇ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದAಗವಾಗಿ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದಾರ್ಥ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಈತನಕ ಪಠ್ಯ, ಉಚಿತ ಬಸ್ ಪಾಸ್, ಹಾಗೂ ಸಮವಸ್ತçವನ್ನು ನೀಡುತ್ತ ಬಂದಿರು ವುದು ಪ್ರಶಂಸನೀಯ ಕಾರ್ಯ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದಾರ್ಥ ಕಾಲೇಜಿನ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಹಾಕಿ ಉನ್ನತ ಹುದ್ದೆಗಳಾದ ಕೆ.ಎ.ಎಸ್. ಐಎಎಸ್. ಐಪಿಎಸ್, ಎಂಬಿಬಿಎಸ್, ಮುಂತಾವುಗಳನ್ನು ಪಡೆದು ಕೀರ್ತಿವಂತರಾಗಿರಿ ಎಂದು ಹಾರೈಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪಿ.ತಿಪ್ಪಣ್ಣ ಬಾಗಲವಾಡ ಅವರು ಮಾತನಾಡಿ, ಕಳೆದ ಎರಡು ವರ್ಷಗಳನ್ನು ಹೊರತು ಪಡಿಸಿ ಉಳಿದ ಏಳು ವರ್ಷಗಳ ಕಾಲವೂ ವಿದ್ಯಾರ್ಥಿಗಳಿಗೆ ಅನೇಕ ಅನುಕೂಲಗಳನ್ನು ಒದಗಿಸಲಾಗಿತ್ತು. ಈ ವರ್ಷದಿಂದ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ವಿದ್ಯಾರ್ಜನೆ ಹೆಚ್ಚು ಗಮನಕೊಟ್ಟು ತಮ್ಮ ಏಳಿಗೆಯನ್ನು ಸಂಸ್ಥೆಯ ಶ್ರೇಯಸ್ಸನ್ನು ಕಾಣಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಸನಗೌಡ ಕುರಕುಂದಿ, ಕಾರ್ಯದರ್ಶಿ ಚನ್ನಬಸವ ನಾಯಕ, ಆರೋಗ್ಯ ಇಲಾಖೆಯ ರಾಮು ಹಳ್ಳೆಪ್ಪ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮಲ್ಲನಗೌಡ ಪಾಟೀಲ ನಕ್ಕುಂದಿ, ತಾಲೂಕಾ ಹಿಂದುಳಿದ ವರ್ಗ ಒಕ್ಕೂಟದ ಅಧ್ಯಕ್ಷ ಎಂ. ಪ್ರವೀಣಕುಮಾರ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಚನ್ನಬಸವ ಸೇರಿದಂತೆ ಉಪನ್ಯಾಸಕರು ಹಾಗೂ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಾಚಾರ್ಯ ಹನುಮಂತ ಹರವಿ, ಕ.ಸಾ.ಪ.ತಾ.ಅಧ್ಯಕ್ಷ ರವಿಕುಮಾರ ಪಾಟೀಲ್, ಹಾಲುಮಾತ ಸಮಾಜದ ಅಧ್ಯಕ್ಷರಾದ ಸತ್ಯನಾರಾಯಣ, ಹಿರಿಯ ನ್ಯಾಯವಾದಿ ಗುಮ್ಮಾ ಬಸವರಾಜ, ಜ್ಞಾನೋದಯ ಸಂಸ್ಥೆಯ ಚಂದ್ರು, ತಾಲೂಕು ಚುಟುಕು ಸಾಹಿತ್ಯ ಅಧ್ಯಕ್ಷ ತಾಜುದ್ದೀನ್, ಅರಣ್ಯಾಧಿಕಾರಿ ರಾಜೇಶನಾಯಕ, ವನಶ್ರೀ ಪೌಂಡೇಷನ್ ಮಾನವಿ ತಾಲೂಕಾಧ್ಯಕ್ಷ ಶರಣಬಸವ, ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.
Comments
Post a Comment