ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಲು ಶಾಸಕ ಶಿವರಾಜ ಪಾಟೀಲ ಕೀಳು ರಾಜಕೀಯ- ರವಿ ಬೋಸರಾಜು.
ನಗರಸಭೆ ಚುನಾವಣೆಯಲ್ಲಿ ಗೆಲ್ಲಲು ಶಾಸಕ ಶಿವರಾಜ ಪಾಟೀಲ ಕೀಳು ರಾಜಕೀಯ- ರವಿ ಬೋಸರಾಜು. ರಾಯಚೂರು,ಮಾ.30-ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಲು ಶಾಸಕ ಡಾ.ಶಿವರಾಜ ಪಾಟೀಲ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಆರೋಪಿಸಿದರು.ಅವರಿಂದು ನಗರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರಸಭೆಯಲ್ಲಿ ಹಿಂಬಾಗಿಲಿನಿಂದ ಪ್ರಜಾಪ್ರಭುತ್ವ ವಿರೋಧಿಯಾಗಿ ನಗರಸಭೆ ಸದಸ್ಯರನ್ನು ಶಾಸಕರು ಅಪಹರಣ ಮಾಡಿಸಿದ್ದಾರೆಂದು ದೂರಿದ ಅವರು ವಾರ್ಡ ನಂ.26 ಶಹನಾಜ ಬೇಗಂರನ್ನು ಸ್ಪರ್ಶ ಆಸ್ಪತ್ರೆಯಿಂದ ಅಪಹರಣ ಮಾಡಿಸಿದ್ದಾರೆ ಎಂದರು.ಅದೆ ರೀತಿ ನಗರಸಭೆ ಸದಸ್ಯ ಸುನೀಲ ಕುಮಾರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿ ತಮ್ಮತ್ತ ಸೆಳೆದಿದ್ದಾರೆ ಅದೆ ರೀತಿ ಹೇಮಲತಾ ಬೂದೆಪ್ಪರವರನ್ನು ಅನೇಕ ತಂತ್ರಗಳ ಮೂಲಕ ತಮ್ಮತ್ತ ಸೆಳೆದಿದ್ದಾರೆ ಇಂತಹ ಅನೇಕ ನಿದರ್ಶನ ಮೂಲಕ ಶಾಸಕ ಡಾ.ಶಿವರಾಜ ಪಾಟೀಲ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.ಈ ಸಂದರ್ಭದಲ್ಲಿ ಅಸ್ಲಂ ಪಾಶಾ, ನರಸಿಂಹಲು ಮಾಡಗಿರಿ ಇನ್ನಿತರರು ಇದ್ದರು.
Comments
Post a Comment