ಜ್ಞಾನ ಮತ್ತು ಭಕ್ತಿ ಹಾಗೂ ವೈರಾಗ್ಯಕ್ಕೆ ದೇವರ ಅನುಗ್ರಹ ಲಭ್ಯ- ಶ್ರೀ ಸುಬುಧೇಂದ್ರತೀರ್ಥರು.

 ಜ್ಞಾನ ಮತ್ತು ಭಕ್ತಿ ಹಾಗೂ ವೈರಾಗ್ಯಕ್ಕೆ ದೇವರ ಅನುಗ್ರಹ ಲಭ್ಯ- ಶ್ರೀ ಸುಬುಧೇಂದ್ರತೀರ್ಥರು.                ರಾಯಚೂರು,ಮಾ.31-ಜ್ಞಾನ ಮತ್ತು ಭಕ್ತಿ ಹಾಗೂ ವೈರಾಗ್ಯಕ್ಕೆ ದೇವರ ಅನುಗ್ರಹ ಲಭಿಸುತ್ತದೆ ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು.                     ಅವರಿಂದು ನಗರದ ಜೋಡು ವೀರಾಂಜಿನೇಯ ದೇವಸ್ಥಾನದಲ್ಲಿ ಮೂರು ದಿನಗಳ ಜ್ಞಾನ ಸತ್ರದ ಕೊನೆ ದಿನದ   ಜ್ಞಾನ ಸತ್ರದ   ಆಶೀರ್ವಚನ ನೀಡುತ್ತ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಜ್ಞಾನ ,ಭಕ್ತಿ, ವೈರಾಗ್ಯಯುಳ್ಳವರಾಗಬೇಕೆಂದರು. ಜೋಡು ವೀರಾಂಜೀನೇಯ ದೇವಸ್ಥಾನವನ್ನು  ನಡೆದಾಡುವ ರಾಯರೆಂದೆ ಪ್ರಖ್ಯಾತರಾದ ಶ್ರೀ ಸುಶಮೀಂದ್ರತೀರ್ಥರು ಪ್ರತಿಷ್ಠಾಪಿಸಿದ್ದರು ಅವರ ಅನುಗ್ರಹ ನಿಮ್ಮ ಮೇಲೆ ಸದಾಯಿರಲೆಂದರು.                                                  ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ವೈದಿಕ, ಧಾರ್ಮಿಕ,ಆಧ್ಯಾತ್ಮಿಕ ಮತ್ತು ಲೌಕಿಕ ವಿದ್ಯೆ ಕಲಿಸಿಕೊಡಲಾಗುತ್ತದೆ ಎಂದರು .                       ವಿವಿಧ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.ನಂತರ ಶ್ರೀ ಮನ್ಮೂಲ ರಾಮದೇವರ ಸಂಸ್ಥಾನ ಪೂಜೆ ಸಹ ನೆರವೇರಿತು. ಭಕ್ತರು ಪಾಲ್ಗೊಂಡಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ