ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ
ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ. ರಾಯಚೂರು,ಮಾ.31-ನಗರದ ಜವಾಹರನಗರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ತೃತೀಯ ವಾರ್ಷಿಕೋತ್ಸವ ಅಂಗವಾಗಿ ನಡೆದ ಮೂರು ದಿನಗಳ ಜ್ಞಾನಸತ್ರದ ಮೂರನೆ ದಿನವಾದ ಇಂದು ಸಂಜೆ ಪಂಡಿತರು, ವಿಧ್ವಾಂಸರು ಹಾಗೂ ವಿದ್ಯಾರ್ಥಿಗಳೊಂದಿಗೆ ಪೀಠಾಧೀಪತಿಗಳಾದ ಶ್ರೀಸುಬುಧೇಂದ್ರತೀರ್ಥರು ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯರಾದ ಶ್ರೀ ಗಿರಿಯಾಚಾರ್ ವಾಕ್ಯಾರ್ಥಗೋಷ್ಠಿ ನೆರವೇರಿಸಿದರು. ವಿವಿಧ ವಿಷಯಗಳ ಬಗ್ಗೆ ಸಮಗ್ರವಾಗಿ ವಿಷಯ ಮಂಡಿಸಲಾಯಿತು. ಭಕ್ತರು ಕುತೂಹಲದಿಂದ ವ್ಯಾಕ್ಯಾರ್ಥಗೋಷ್ಠಿ ವೀಕ್ಷಿಸಿ ಜ್ಞಾನಾರ್ಜನೆ ಪಡೆದರು. ನಂತರ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮನಮೋಹಕವಾದ ನಾಟಕ ಪ್ರದರ್ಶನ ನಡೆಯಿತು.
Comments
Post a Comment