ನಗರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸುವವರು ಯಾರು? ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿ!

 ನಗರಸಭೆ  ಅಧ್ಯಕ್ಷ ಸ್ಥಾನ ಅಲಂಕರಿಸುವವರು ಯಾರು? ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿ!                              -ಜಯ ಕುಮಾರ ದೇಸಾಯಿ ಕಾಡ್ಲೂರು.                                  ರಾಯಚೂರು,ಮಾ.28-ನಗರಸಭೆಯಲ್ಲಿ ಅಧ್ಯಕ್ಷರಾಗಿದ್ದ ಈ.ವಿನಯ್ ಕುಮಾರ್ ರವರ ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಾ.30 ರಂದು ಚುನಾವಣೆ ನಡೆಯಲಿದ್ದು ಅಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀರ್ವ ಹಣಾಹಣಿ ಏರ್ಪಟ್ಟಿದ್ದು ಈಗಾಗಲೆ ಬಿಜೆಪಿ ಸದಸ್ಯರು ನಗರದಿಂದ ದೂರದ ಊರುಗಳಿಗೆ ತೆರಳಿದ್ದು ಐಷಾರಾಮಿ ಹೋಟಲ್ಗಳಲ್ಲಿ ತಂಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನಗರ ಶಾಸಕರು, ಸಂಸದರು ಅವರನ್ನು ಭೇಟಿಯಾಗಿ ಬಂದಿದ್ದಾರೆ ಏತನ್ಮಧ್ಯೆ ನಗರಭೆಯಲ್ಲಿ 35 ಸದಸ್ಯರಿದ್ದು ಅದರಲ್ಲಿ ಬಿಜೆಪಿ 12, ಕಾಂಗ್ರೆ ಸ್  11 , ಜೆಡಿಎಸ್ 3 ಹಾಗೂ ಪಕ್ಷೇತರರು 9 ಜನರಿದ್ದು ಓರ್ವ ಶಾಸಕರು, ಓರ್ವ ಸಂಸದರು ಮತ್ತು ಓರ್ವ ವಿಧಾನ ಪರಿಷತ್ ಸದಸ್ಯರಿದ್ದು ಮಾತದಾನ ಮಾಡಬಹುದಾಗಿದ್ದು, ನಗರ ಶಾಸಕರು ಮತ್ತು ಸಂಸದರು  ಬಿಜೆಪಿಯವರಾಗಿದ್ದರಿಂದ ಬಿಜೆಪಿಗೆ 14 ಸಂಖ್ಯಾಬಲ ಆಗುತ್ತದೆ ಇದರೊಟ್ಟಿಗೆ ಪಕ್ಷೇತರರು ಮೂರ್ನಾಲ್ಕು ಸದಸ್ಯರು ಇತ್ತ ಬಂದರೂ ಇವರು ಬಹುಮತ ಸಾಬೀತು ಮಾಡಬಹುದು ಅಲ್ಲದೆ ಜೆಡಿಎಸ್ ಪಕ್ಷದ ಸದಸ್ಯರು ಸಹ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದು ಬಿಜೆಪಿಗೆ ಪ್ಲಸ್ ಆಗಬಹುದು ಆದರೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ವಿಪ್ ನೋಟೀಸನ್ನು ಜೆಡಿಎಸ್ ಸದಸ್ಯರ ಮನೆಗಳಿಗೆ ತಲುಪಿಸಿದ್ದಾರೆ ಎನ್ನಲಾಗಿದ್ದು ಇದು ಜೆಡಿಎಸ್ ಸದಸ್ಯರಿಗೆ ಬಿಸಿ ತುಪ್ಪವಾಗಬಹುದು ಅಥವಾ ಅದನ್ನು ಉದಾಸೀನ ಮಾಡಿದರೂ ಅಚ್ಚರಿಯಿಲ್ಲವೆನ್ನಬಹುದು ಏಕೆಂದರೆ ಅವರು ಈಗಾಗಲೆ  ಬಿಜೆಪಿಗೆ ಹತ್ತಿರವಾಗಿದ್ದಾರೆ.ಇತ್ತ ಕಾಂಗ್ರೆಸ್ ಸಹ ತನ್ನ ನಡೆ ನಿಗೂಡವಾಗಿರಿಸಿದ್ದು ಶತಾಯ ಗತಾಯ ಕಾಂಗ್ರೆಸ್ ತೆಕ್ಕೆಯಿಂದ ನಗರಸಭೆ ಅಧ್ಯಕ್ಷಗಾದಿ ತಪ್ಪಬಾರದೆಂಬ ಹಟಕ್ಕೆ ಬಿದ್ದಿದ್ದು ಪಕ್ಷೇತರರು ಮತ್ತು ಸ್ವಪಕ್ಷದವರಿಗೆ ನೈತಿಕತೆ ಪಾಠ ಹೇಳುತ್ತಿದ್ದು ಉಂಡ ಮನೆಗೆ ದ್ರೋಹ ಬಗೆಯದಂತೆ ಎಚ್ಚರಿಸಿದ್ದಾರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ತನ್ನ ಚಾಣಾಕ್ಷ ನಡೆ ಅನುಸರಿಸಿದ್ದು ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರು ಮತಯಾದಿಯಲ್ಲಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತದ ಕದ ತಟ್ಟಿದ್ದು ಅವರ ಮತದಾನ ಹಕ್ಕನ್ನು ನಗರಸಭೆ ಚುನಾವಣೆಯಲ್ಲಿ ಚಲಾಯಿಸದಂತೆ ಮೊಟಕು ಮಾಡಬೇಕೆಂದು ಆಗ್ರಹಿಸಿದ್ದಾರೆ .ಕಾಂಗ್ರೆಸ್ ಇದಕ್ಕೆ ಸರಿ ಸಾಟಿಯಾಗಿ ಉಚ್ಚ ನ್ಯಾಯಾಲಯದಲ್ಲಿ ಮತದಾನ ಹಕ್ಕು ಮೊಟಕು ಆಗದಂತೆ ನ್ಯಾಯ ನೀಡಬೇಕೆಂದ ಕಾನೂನಿನ ಮೊರೆ ಹೋಗಿದ್ದು ನ್ಯಾಯಾಲಯ ತೀರ್ಪು ಯಾರ ಪರ ಬರುತ್ತದೆ ಎಂಬುದು ಒಂದೆಡೆ ಕುತೂಹಲ ಮೂಡಿಸಿದ್ದರೆ ಮತ್ತೊಂದೆಡೆ ಸಂಖ್ಯಾ   ಬಲದಲ್ಲಿ ಯಾರು ಬಹುಮತಕ್ಕೆ ಸಮೀಪದಲ್ಲಿದ್ದಾರೆಂದು ಯೋಚಿಸಿದರೆ ಬಿಜೆಪಿ ಎಂದು ಮೇಲ್ನೋಟಕ್ಕೆ ಕಂಡರು ಆಂತರಿಕವಾಗಿ ಏನು ನಡೆಯುತ್ತಿದೆ ಉಭಯ ಪಕ್ಷಗಳಲ್ಲಿ ಎಂದು ಬುಧವಾರವೆ ಬಹಿರಂಗೊಳ್ಳಲಿದ್ದು  ನಗರಸಭೆ ನಗರದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ, ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ  ಹಿಂದೆ ಬಿದ್ದಿದ್ದರೂ  ಇಂತಹ ರಾಜಕೀಯ ಕುತುಹಲಕ್ಕೆ ಸದಾ ಮುಂದೆ ಎಂದು ಜನರು ನಗರಸಭೆ ಆಡಳಿತದ ಬಗ್ಗೆ ಒಳ ಒಳಗೆ ಸಂಕಟ  ಅನುಭವಿಸುತ್ತಿರುವುದಂತು ಸತ್ಯವಾಗಿದ್ದು ಉಳಿದ ಅವಧಿಯಲ್ಲಾದರು ಸುಭದ್ರ ಆಡಳಿತ ನೀಡುವಂತಾಗಲಿ ಎಂದು ಆಶಿಸುತ್ತಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್