ಕಾಂಗ್ರೆಸ್ ಗೆ ತೀರ್ವ ಹಿನ್ನಡೆ: ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಲಲಿತಾ ಕಡಗೋಲ್ ಆಂಜಿನೇಯ್ಯ ಗೆಲುವು.

ಕಾಂಗ್ರೆಸ್ ಗೆ ತೀರ್ವ ಹಿನ್ನಡೆ: ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಲಲಿತಾ ಕಡಗೋಲ್ ಆಂಜಿನೇಯ್ಯ ಗೆಲುವು.          ರಾಯಚೂರು,ಮಾ.30- ತೀರ್ವ ಕುತೂಹಲ ಕೆರಳಿಸದ್ದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ  ಲಲಿತಾ ಕಡಗೋಲ ಆಂಜಿನೇಯ್ಯ ಗೆಲುವು ಸಾಧಿಸಿದ್ದು ನ್ಯಾಯಾಲಯದ ಆದೇಶದ ನಂತರ ಅಧೀಕೃತ ಘೋಷಣೆ ಮಾಡುವಂತೆ ಸೂಚಿಸಲಾಗಿದ್ದು ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತೀರ್ವ ಹಿನ್ನಡೆಯಾಗಿದೆ. ಇಂದು ನಗರಸಭೆ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿಯಿಂದ ಲಲಿತಾ ಕಡಗೋಲ ಆಂಜಿನೇಯ್ಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ ಅತ್ತ ಕಾಂಗ್ರೆಸ್ ಪಕ್ಷದಿಂದ ಸಾಜೀದ ಸಮೀರ್ ನಾಮಪತ್ರ ಸಲ್ಲಿಸಿದ್ದರು ತದನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿಯ ಲಲಿತಾ ಪರ 19 ಸದಸ್ಯರು ಕೈ ಎತ್ತಿದರೆ 16 ಸದಸ್ಯರು ಕಾಂಗ್ರೆಸ್ ಪರ ಕೈ ಎತ್ತಿದ್ದರು ಬಿಜೆಪಿ ಪಕ್ಷವು 3 ಸದಸ್ಯರ  ಅಂತರದಿಂದ ಅಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಿತು.ಆದರೆ ನ್ಯಾಯಾಲಯ ಆದೇಶ ಬರುವ ವರೆಗೂ ಫಲಿತಾಂಶ ಪ್ರಕಟಣೆ ಅಧಿಕೃತವಾಗಿ ತಿಳಿಸದಂತೆ ನ್ಯಾಯಾಲಯ ಸೂಚಿಸಿದೆ.ತೀರ್ವ ಜಿದ್ದಾಜಿದ್ದಿಯಿಂದ ಕೂಡಿದ್ದ ನಗರಸಭೆ ಅಧ್ಯಕ್ಷ ಸ್ಥಾನ ಕಮಲದ ತೆಕ್ಕೆಗೆ ಬರುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಬಲ ಹೆಚ್ಚಿದಂತಾಗಿದ್ದು ಈ ಬಗ್ಗೆ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ನಗರಸಭೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಇಲ್ಲಿ ಪಕ್ಷಭೇಧವಿಲ್ಲವೆಂದ ಅವರು ಬಿಜೆಪಿ ಜನರ ಒಲವು ಗಳಿಸಿದ್ದರಿಂದ ಅಧಿಕಾರ ಲಭಿಸಿದ್ದು ಕಾಂಗ್ರೆಸ್ ಯುವ ನಾಯಕರು ಆರೋಪಿಸಿದಂತೆ ನಾವು ಯಾವ ಸದಸ್ಯರ ಅಪಹರಣ ಅಥವಾ ಬೆದರಿಕೆ ಒಡ್ಡಿಲ್ಲವೆಂದರು. ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ ಕಾಂಗ್ರೆಸ್ ಪಕ್ಷದ ಕೆಲ ನಾಯಕರ ತಪ್ಪಿನಿಂದ ನಾವು ಸೋತಿದ್ದು ಇದು ಕ್ಷಣಿಕ ಸೋಲು ಮುಂದಿನ ದಿನದಲ್ಲಿ ಸಂಘಟನಾತ್ಮಕವಾಗಿ ನಾವು ಬಲಿಷ್ಠರಾಗುತ್ತೇವೆ ನಗರಸಭೆಯಲ್ಲಿ ಪ್ರಭಲ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆಂದರು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸಾಜಿದ ಸಮೀರ ಮಾತನಾಡಿ ನಮ್ಮ ಪಕ್ಷದ ಕೆಲ ಸದಸ್ಯರಿಂದ ನನಗೆ ಸೋಲಾಗಿದ್ದು ಅವರ ಬಗ್ಗೆ ವರಿಷ್ಠರಿಗೆ ದೂರು ನೀಡಲಾಗಿದೆ ಅವರನ್ನು ಪಕ್ಷದಿಂದ ವಜಾಗೊಳಿಸಲು ಆಗ್ರಹಿಸುತ್ತೇನೆಂದರು.                             ಸಂಭ್ರಮಾಚರಣೆ: ಬಿಜೆಪಿ ಪಕ್ಷದ ಲಲಿತಾ ಕಡಗೋಲ ಆಂಜಿನೇಯ್ಯ ಅಧ್ಯಕ್ಷರಾಗಿ ಆಯ್ಕೆ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಕೇಸರಿ ಬಣ್ಣ ಎರಿಚಿಕೊಂಡು ನಗರಸಭೆ ಬಳಿ ಸಂಭ್ರಮಾಚರಣೆ ನಡೆಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ