ಮೂರು ದಿನಗಳ ಜ್ಞಾನ ಸತ್ರ ಕಾರ್ಯಕ್ರಮ: ಕರ್ತವ್ಯದಿಂದ ವಿಮುಖರಾಗಬೇಡಿ- ಶ್ರೀಸುಬುಧೇಂದ್ರತೀರ್ಥರು.

  ಮೂರು ದಿನಗಳ ಜ್ಞಾನ ಸತ್ರ ಕಾರ್ಯಕ್ರಮ: ಕರ್ತವ್ಯದಿಂದ ವಿಮುಖರಾಗಬೇಡಿ- ಶ್ರೀಸುಬುಧೇಂದ್ರತೀರ್ಥರು.           ರಾಯಚೂರು,ಮಾ.29- ನಮ್ಮ ನಮ್ಮ ಕರ್ತವ್ಯಗಳನ್ನು ನಾವೆಲ್ಲರೂ ಪಾಲಿಸಿದರೆ ಸಮಾಜದಲ್ಲಿ ಶ್ರೇಯಸ್ಸು ಪಡೆಯಲು ಸಧ್ಯವೆಂದು ಮಂತ್ರಾಲಯ ಶ್ರೀ ರಾಘವೇoದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ನಗರದಲ್ಲಿ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ತೃತೀಯ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮೂರು ದಿನಗಳ ಜ್ಞಾನ ಸತ್ರ ಅಂಗವಾಗಿ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದರು.ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಕರ್ತವ್ಯ ಪ್ರಜ್ಞೆ ಬಗ್ಗೆ ತಿಳಿಸುತ್ತ ನೀನು  ನಿನ್ನ ಕರ್ಮ ಮಾಡು ಫಲದ ಅಪೇಕ್ಷೆ ನನಗೆ ಬಿಡು ಎಂದು ಹೇಳಿದಂತೆ ನಾವೆಲ್ಲರು ನಮ್ಮ ನಮ್ಮ ಕರ್ತವ್ಯ ಪ್ರಜ್ಞೆಯುಳ್ಳವರಾಗಬೇಕೆಂದರು.ನಮ್ಮ ಮಠದಲ್ಲಿ ಸಂಸ್ಕೃತ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಸನಾತನ ಧರ್ಮದ ವೇದಧ್ಯಯನ ಮುಂತಾದವುಗಳು ಹೇಳಿಕೊಡಲಾಗುತ್ತದೆ ನಮ್ಮ ಸಂಸ್ಕೃತಿ ಬಿಡಬೇಡಿ ಎಂದು  ಹೇಳಿದ ಅವರು ಶ್ರೀಮಠವು ಸದಾ ಬೆನ್ನೆಲಬು ಆಗಿರುತ್ತದೆ ಎಂದರು. ಶ್ರೀ ಹರಿ ಆಚಾರ್ ,ರಾಮಕೃಷ್ಣಾಚಾರ್ ಕರಣಂ ರವರಿಂದ ಪ್ರವಚನ  ನಡೆಯಿತು.ಈ ಸಂದರ್ಭದಲ್ಲಿ ರಾಜಾ ಎಸ್ ಗಿರಿಯಾಚಾರ್ ಸೇರಿದಂತೆ ಪಂಡಿತರು, ವಿಧ್ವಾಂಸರು, ವಿದ್ಯಾಪೀಠದ ವಿದ್ಯಾರ್ಥಿಗಳಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ