ಪತ್ರಕರ್ತರಿಗೆ ಅಯವ್ಯಯದಲ್ಲಿ ವೈದ್ಯಕೀಯ ವೆಚ್ಚ ಅನುದಾನ ಮೀಸಲಿಡಲು ಮನವಿ

 


ಪತ್ರಕರ್ತರಿಗೆ ಅಯವ್ಯಯದಲ್ಲಿ  ವೈದ್ಯಕೀಯ ವೆಚ್ಚ ಅನುದಾನ ಮೀಸಲಿಡಲು ಮನವಿ.        ರಾಯಚೂರು,ಮಾ.28- ನಗರದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ನಗರಸಭೆ ಬಜೆಟ್ ನಲ್ಲಿ ವೈದ್ಯಕೀಯ ವೆಚ್ಚಕ್ಕೆ ಅನುದಾನ ಮೀಸಲು ಇಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರಸಭೆ ಹಂಗಾಮಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.


ನಗರದ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ 2022-2023ನೇ ಸಾಲಿನ ಆಯ್ಯವಯ ಮಂಡನೆ ಪೂರ್ವಭಾವಿ ಸಭೆಯಲ್ಲಿ, ಹಂಗಾಮಿ ಅಧ್ಯಕ್ಷೆ ನರಸಮ್ಮ ಹಾಗೂ ಪೌರಾಯುಕ್ತ  ಕೆ.ಮುನಿಸ್ವಾಮಿಯವರಿಗೆ, ಮನವಿ ಸಲ್ಲಿಸಲಾಯಿತು.


ನಗರದಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ ಸುಮಾರು 100 ಜನ ಪ್ರತಕರ್ತರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ತೀವ್ರ ತ್ವರದ ಆರೋಗ್ಯದ ಸಮಸ್ಯೆ ಎದುರಾಗ ವೈದ್ಯಕೀಯ ವೆಚ್ಚ ಭರಿಸಲು ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಹೀಗಾಗಿ ನಗರಸಭೆಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚ ಭರಿಸುವ 25 ಲಕ್ಷ ರೂಪಾಯಿ ಮೀಸಲು ಇರಿಸಬೇಕು ಮನವಿ ಸಲ್ಲಿಸಲಾಯಿತು. ಅಲ್ಲದೇ ಬೇರೆ ಜಿಲ್ಲೆಗಳಲ್ಲಿ ನಗರಗಳಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ ಅನುದಾನವನ್ನು ಮೀಸಲು ಇರಿಸಿರುವ ಉದಾಹರಣೆಯಿವೆ ಎಂದು ಗಮನಕ್ಕೆ ತರುವ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.


ಈ ವೇಳೆ  ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಬಸವರಾಜ ನಾಗಡದಿನ್ನಿ, ಆರ್.ಗುರುನಾಥ, ಜಗ್ನನಾಥ ದೇಸಾಯಿ, ಸಿದ್ದಯ್ಯ ಸ್ವಾಮಿ, ಕೆ.ಸತ್ಯನಾರಾಯಣ, ವೆಂಕಟೇಶ್ ಹೂಗಾರ,  ಜಗ್ನನಾಥ ಪೂಜಾರಿ, ಜಯಕುಮಾರ ದೇಸಾಯಿ ಕಾಡ್ಲೂರು, ಸಣ್ಣ ಈರಣ್ಣ,  ರಾಚಯ್ಯ ಸ್ವಾಮಿ, ಬಾಬ ಹಟ್ಟಿ, ಕ್ಯಾಮರಾಮನ್ ದುರ್ಗೇಶ್ ಇನ್ನಿತರರು  ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್