ಪ್ರೇಕ್ಷಕರ ಮನ ರಂಜಿಸಿದ ರೂಪದರ್ಶಿಯರ ಫ್ಯಾಷನ್ ಶೋ
ಪ್ರೇಕ್ಷಕರ ಮನ ರಂಜಿಸಿದ ರೂಪದರ್ಶಿಯರ ಫ್ಯಾಷನ್ ಶೋ. ರಾಯಚೂರು,ಮಾ.28- ಝಗಮಗಿಸುವ ದೀಪಗಳು, ಕಣ್ಣು ಕೋರೈಸುವ ಧಿರಿಸು, ವೇದಿಕೆ ಮೇಲೆಲ್ಲ ರೂಪದರ್ಶಿಯರ ಬಿಂಕದ ವಯ್ಯಾರದ ನಡಿಗೆ ...ಇದೆಲ್ಲ ಕಂಡು ಬಂದಿದ್ದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪತ್ರಕರ್ತ ರಾಮು ಮತ್ತು ಮಿಸ್ ಕರ್ನಾಟಕ ಖ್ಯಾತಿಯ ಸಂಗೀತಾ ಹೊಳ್ಳ ರವರ ಸಹ ಭಾಗಿತ್ವದಲ್ಲಿ ಆಯೋಜಿಸಿದ ಧಮಾಕ-2022 ಷ್ಯಾಷನ್ ರೇನ್ ಬೋ ಮನರಂಜನಾ ಕಾರ್ಯಕ್ರಮದಲ್ಲಿ ಲಲನೆಯರ ಕ್ಯಾಟ್ ವಾಕ್ ಮತ್ತು ಉತ್ತರ ಕರ್ನಾಟಕದ ಇಲಕಲ್ ಸಿರೆಯುಟ್ಟು ರೂಪದರ್ಶಿಯರು ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಪ್ರತಿಯೊಬ್ಬ ರೂಪದರ್ಶಿ ವೇದಿಕಯ ಮೇಲೆ ಮಾರ್ಜಾಲ ನಡಿಗೆ ಪ್ರದರ್ಶಿಸಿ ಪ್ರೇಕ್ಷಕರ ಶಿಲ್ಲೆ ಚಪ್ಪಾಳೆ ಪಡೆದರು. ಇದೆ ವೇಳೆ ಜೂ.ವಿಷ್ಣುವರ್ಧನ್ ರವರು ಆಪ್ತರಕ್ಷಕ ಚಿತ್ರದ "ಗರನೆ ಗರ ಗರನೆ" ಹಾಡಿಗೆ ನೃತ್ಯವು ನಿಜವಾಗಿ ವಿಷ್ಣುವರ್ಧನ್ ರವರೆ ಧರೆಗಿಳಿದು ಬಂದಿದ್ದಾರೆ ಎನ್ನಿಸಿತು. ನರಗುಂದ ಬಂಡಾಯ ಚಿತ್ರದ ನಿರ್ದೇಶಕ ಸಿದ್ದೇಶ ವಿರಕ್ತಿಮಠ ಸಹ "ಯಾಮಿನಿ ಯಾರಮ್ಮ ನೀನು ಯಾಮಿನಿ" ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮನರಂಜಿಸಿದರು. ಉದಯೋನ್ಮಖ ಗಾಯಕರಿಂದ ಪುನಿತ್ ಅಭಿನಯದ ಚಿತ್ರ ಗೀತೆಗಳನ್ನು ಹಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸವೋಚ್ಚ ನ್ಯಾಯಾಲಯ ನ್ಯಾಯವಾದಿಗಳಾದ ದೇವಣ್ಣ ನಾಯಕ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಕ್ಷ್ಮಿಕಾಂತಮ್ಮ, ಸಿದ್ದಮ್ಮ ವಸಂತ್, ನಾಗವೇಣಿ ಪಾಟೀಲ, ವೆಂಕಟರೆಡ್ಡಿ, ಪತ್ರಕರ್ತರಾದ ಭೀಮರಾಯ ಹದ್ದಿನಾಳ ಕಾರ್ಯಕ್ರಮದ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು ಆಯೋಜಕರಾದ ರಾಮು ಇನ್ನಿತರರು ಇದ್ದರು.
Comments
Post a Comment