ಮೇ.1 ರಂದು ಶ್ರೀ ಜಗನ್ನಾಥ ದಾಸರು ಚಿತ್ರತಂಡಕ್ಕೆ ಸನ್ಮಾನ ಕಾರ್ಯಕ್ರಮ- ಜಗನ್ನಾಥ ಕುಲಕರ್ಣಿ.

 ಮೇ.1 ರಂದು ಶ್ರೀ ಜಗನ್ನಾಥ ದಾಸರು ಚಿತ್ರತಂಡಕ್ಕೆ ಸನ್ಮಾನ ಕಾರ್ಯಕ್ರಮ- ಜಗನ್ನಾಥ ಕುಲಕರ್ಣಿ.                                 ರಾಯಚೂರು,ಏ.29-ದಾಸ ಸಾಹಿತ್ಯದಲ್ಲಿ ಹೊಸ ಅಧ್ಯಾಯ ಬರೆದ  ಶ್ರೀ ಜಗನ್ನಾಥ ದಾಸರು ಚಲನಚಿತ್ರ ತಂಡಕ್ಕೆ ಮೇ 1 ರಂದು ಸನ್ಮಾನಿಸಲಾಗುತ್ತಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗನ್ನಾಥ ಕುಲಕರ್ಣಿ ಹೇಳಿದರು.                                                       ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕೆಕೆಬಿಎಂಎಸ್, ಟಿಟಿಡಿ , ಆದಿ ಶಂಕರ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ   ಅಂದು ಸಂಜೆ 6 ಗಂಟೆಗೆ ನಗರದ ಗಾಜಗಾರಪೇಟೆಯ ಶೃಂಗೇರಿ ಶಂಕರ ಮಠದ ಶ್ರೀಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಭೂತ ಪೂರ್ವ ಯಶಸ್ಸು ಕಂಡ ಶ್ರೀ ಜಗನ್ನಾಥ ದಾಸರು ಚಲನಚಿತ್ರದ ನಿರ್ಮಾಪಕರು, ನಿರ್ದೇಶಕರು, ನಟರು, ಕಲಾವಿದರಿಗೆ ಸನ್ಮಾನಿಸಲಾಗುತ್ತಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಿವರಾಜ ಪಾಟೀಲ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಭಾಗವಹಿಸಲಿದ್ದಾರೆಂದರು. ನಿರ್ದೇಶಕ ಮಧುಸೂಧನ್ ಹವಾಲ್ದಾರ್ ಮಾತನಾಡಿ ಶರಣ ಮತ್ತು ದಾಸ ಸಾಹಿತ್ಯದ ತೊಟ್ಟಿಲಾಗಿರುವ ಜಿಲ್ಲೆಯಲ್ಲಿ ಜಗನ್ನಾಥ ದಾಸರು ಚಲನಚಿತ್ರ ಚಿತ್ರಿಕರಣಗೊಂಡು ನೂರು ದಿನಗಳನ್ನು ಪೂರೈಸಿದೆ ನಮಗೆಲ್ಲ ಹೊಸ ಸ್ಪೂರ್ತಿ ತಂದಿದ್ದಲ್ಲದೆ ಆರ್ಥಿಕವಾಗಿ ಚಿತ್ರ ಲಾಭ ಮಾಡಿದೆ ಎಂದ ಅವರು ಇದೀಗ ವಿಜಯದಾಸರು ಚಿತ್ರ ನಗರದ ಪುರಾತನ ಖಾಜನಗೌಡರ ಮನೆ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ನಡೆದಿದ್ದು ದಾಸರ ಜೀವನದ ನೈಜತೆ ಮಾತ್ರ ತೋರಿಸುತ್ತೇವೆಂದ ಅವರು ಮುಂದಿನ ದಿನದಲ್ಲಿ ಶ್ರೀ ಪ್ರಸನ್ನ ವೆಂಕಟದಾಸರು ಚಿತ್ರ ಪ್ರಾರಂಭಿಸಲಾಗುತ್ತದೆ ಎಂದರು.  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಯಲಕ್ಷ್ಮೀ ಮಂಗಳ ಮೂರ್ತಿ ಮಾತನಾಡಿ ಕರೋನಾ ದಂತಹ ವಿಷಮ ಸಂದರ್ಭದಲ್ಲಿ ಜಗನ್ನಾಥ ದಾಸರು ಚಿತ್ರ ನೈತಿಕ ಮತ್ತು ಆಧ್ಯಾತ್ಮಿಕ  ಶಕ್ತಿ ತುಂಬಿದೆ ಎಂದ ಅವರು ಸೂರ್ಯ ಚಂದ್ರರಿವವರೆಗೂ ದಾಸರ ಸತ್ವ ಇರುತ್ತದೆ ಎಂದರು. ಗುರುರಾಜ್ ಆಚಾರ ತಾಳಿಕೋಟಿ ಮಾತನಾಡಿ ಅಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು   ಭಾಗವಹಿಸಬೇಕೆಂದ ಅವರು ಕಾರ್ಯಕ್ರಮದಲ್ಲಿ ಕಲ್ಯಾಣ   ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ  ನೋಂದಣಿ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪ್ರಹ್ಲಾದ ಫಿರೋಜಬಾದ್ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ