ವಾರ್ಡ್ ನಂಬರ್ 17 : ಶಾಸಕರಿಂದ ರಸ್ತೆ ಭೂಮಿ ಪೂಜೆ
ರಾಯಚೂರು,ಏ.23- ಇಂದು ನಗರದ ವಾರ್ಡ್ ನಂ. 17 ರ ಜವಾಹರ್ ನಗರ ಹತ್ತಿರ ಇರುವ ಬಾಪನಯ್ಯ ದೊಡ್ಡಿಯ ಪಕ್ಕದ ರಸ್ತೆಯ ಭೂಮಿ ಪೂಜೆಯನ್ನು ಶಾಸಕರಾದ ಡಾ. ಶಿವರಾಜ್ ಪಾಟೀಲ್ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಲ ಆಂಜನೇಯ, ನಗರ ಪ್ರಾಧಿಕಾರ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ, ನಗರಸಭಾ ಸದಸ್ಯರಾದ ಈ .ಶಶಿರಾಜ್, ಹರೀಶ ನಾಡಗೌಡ ಮುಖಂಡರಾದ ಕಡಗೋಲ ಆಂಜಿನೇಯ್ಯ, ಸೇತು ಮಾಧವರಾವ್ ಕನಕವೀಡು, ಯುವರಾಜ, ವಿನ್ನೂ ಸತ್ಯನಾರಾಯಣ, ಬಡಾವಣೆ ನಿವಾಸಿಗಳು ,ಯುವಕರು ಉಪಸ್ಥಿತರಿದ್ದರು .
Comments
Post a Comment