22 RCR 2 ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.

 

22 RCR 2

ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.                            ರಾಯಚೂರು,ಏ.22-ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಷಿ ಹೇಳಿದರು. ಅವರಿಂದು ನಗರದ ರಂಗ ಮಂದಿರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಏರ್ಪಡಿಸಿದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮರ್ಥವಾಗಿ ನಿಭಾಯಿಸಿದರು. ಯಾರು ಹಸಿವಿನಿಂದ ಸಾಯಬಾರದೆಂದು ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯ ವಿತರಿಸಿದರು ಮತ್ತು ಜನರಿಗೆ ಉಚಿತವಾಗಿ ಒಂದು ಮತ್ತು ಎರಡನೆ ಡೋಸ್ ವ್ಯಾಕ್ಸಿನ್ ನೀಡುವ ಅಭಿಯಾನದಲ್ಲಿ 186 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು ಕರೋನಾ ಹಿಮ್ಮೆಟ್ಟಿಸಲು ಸಾಧ್ಯವಾಯಿತೆಂದರು.   ಜಿಲ್ಲೆಯಲ್ಲಿ ಒಂದನೆ ಡೋಸ್ ಪೂರ್ಣ ಪ್ರಮಾಣದಲ್ಲಾಗಿದ್ದು ಎರಡನೆ ಡೋಸ್ ಶೇ.65 ರಷ್ಟಾಗಿದ್ದು ಬೇಗನೆ ಶೇ.100 ಸಾಧಿಸಬೇಕೆಂದರು. ಮೋದಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 2.31 ಲಕ್ಷ ಕೋಟಿ ರೂ. ನೀಡಲಾಗಿದೆ ಎಂದರು.   ಆಯುಷ್ಮಾನ್ ಭಾರತ ಅಡಿ ಜಿಲ್ಲೆಯಲ್ಲಿ 36 ಸಾವಿರ ಜನರು ಆರೋಗ್ಯ ಸೇವೆ ಪಡೆದಿದ್ದಾರೆಂದರು. ಕೇಂದ್ರ ಸರ್ಕಾರ ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಿದ್ದು ಈ ಹಿಂದಿನ ಸರ್ಕಾರ ದಿನ ಒಂದಕ್ಕೆ  10 ಕಿ.ಮಿ ಹೆದ್ದಾರಿ ನಿರ್ಮಿಸಿದರೆ ನಮ್ಮ ಸರ್ಕಾರ ದಿನ ಒಂದಕ್ಕೆ 38 ಕಿ.ಮಿ ಹೆದ್ದಾರಿ ನಿರ್ಮಿಸುತ್ತದೆ ಎಂದರು. ದೇಶದಲ್ಲಿ 22 ಐಐಟಿ ಸ್ಥಾಪಿಸಲಾಗಿದೆ ಎಂದರು.  ಜಿಲ್ಲೆಯಲ್ಲಿ ಭಾರತ ಮಾಲಾ ಯೋಜನೆಯಡಿ 6 ಪಥದ ರಸ್ತೆ ನಿರ್ಮಿಸಲಾಗುತ್ತಿದೆ ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ನಾಲ್ಕು ಪಥದ ರಸ್ತೆ ಹಾಗೂ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ನಮ್ಮ ಸರ್ಕಾರ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪಿಸಲು ಬದ್ಧತೆ ಪ್ರದರ್ಶಿಸಿದೆ ಎಂದ ಅವರು ಮೆಡಿಕಲ್ ಯುಜಿ ಮತ್ತು ಪಿಜಿ ಸೀಟು ಹೆಚ್ಚಿಸಲಾಗಿದೆ  ಎಂದರು . ಯಾವುದೆ ದೇಶ ಪ್ರಗತಿ ಕಾಣಬೇಕಾದರೆ ಆರೋಗ್ಯ, ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಕ್ಷೇತ್ರ ಸದೃಡವಾಗಿದ್ದರೆ ಆ ದೇಶ ಬೇಗನೆ ಪ್ರಗತಿ ಕಾಣುತ್ತದೆ ಎಂದರು. ನಿಮ್ಮ ಜಿಲ್ಲೆಯಲ್ಲಿ ಎರೆಡು ಮೂರು ವರ್ಷದಲ್ಲಿ  ವಿಮಾನ ನಿಲ್ದಾಣ ನಿರ್ಮಾಣವಾಗುತ್ತದೆ ಉಡಾನ್ ಯೋಜನೆಯಡಿ ವಿಮಾನ ಸಂಪರ್ಕ ದೊರಕಿಸಿಕೊಡಲಾಗುತ್ತದೆ ಎಂದರು. ಈ  ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ  ಮುನೇನಕೊಪ್ಪ , ಸಂಸದರಾದ ಅಮರೇಶ್ವರ ನಾಯಕ, ಕರಡಿ  ಸಂಗಣ್ಣ, ಶಾಸಕ ಡಾ.ಶಿವರಾಜ ಪಾಟೀಲ ಮುಖಂಡರಾದ ತ್ರಿವಿಕ್ರಮ ಜೋಷಿ, ನಾರಾಯಣರಾವ್, ಮುಕ್ತಾರ್ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್