ರಾಜ್ಯ ಸರ್ಕಾರದ ಶೇ.40 ಭ್ರಷ್ಟಾಚಾರ ಪಿಡುಗು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ತಂಡದಿಂದ ತನಿಖೆಯಾಗಲಿ- ಈಶ್ವರ ಖಂಡ್ರೆ.

ರಾಯಚೂರು,ಏ.20-ರಾಜ್ಯ ಸರ್ಕಾರದ ಶೇ.40 ಕಮೀಶನ ಭ್ರಷ್ಟಾಚಾರ ಪಿಡುಗನ್ನು  ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇತೃತ್ವದ ತಂಡದಿಂದ ನಡೆಯಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.    ಅವರಿಂದು ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ಪೂರ್ವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ   ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ ಪ್ರದಾನಿ ಮೋದಿಯವರು" ನ ಖಾವೂಂಗಾ ನ ಖಾನೆ ದೂಂಗಾ"ಎಂದು ಹೇಳಿ ಇದೀಗ ಅವರ ಪಕ್ಷದ ರಾಜ್ಯ  ಸರ್ಕಾರದಲ್ಲಿ ಮಂತ್ರಿಗಳು ಶೇ.40 ರಷ್ಟು ಕಮೀಶನ್ ಕೇಳಿದ್ದರಿಂದ ನಾಲ್ಕು ಕೋಟಿ ರೂ.ಕಾಮಗಾರಿ ಮಾಡಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾವ ನ್ಯಾಯವೆಂದ ಅವರು ಈ ಕೂಡಲೆ ಈಶ್ವರಪ್ಪರವರನ್ನು ಬಂಧಿಸಬೇಕೆಂದರು.ಮೃತ ಸಂತೋಷ ಕುಟುಂಬಕ್ಕೆ ಒಂದು ಕೋಟಿ.ರೂ.ಪರಿಹಾರ, ಪತ್ನಿಗೆ ಸರ್ಕಾರಿ ಕೆಲಸ ಹಾಗೂ ನಾಲ್ಕು ಕೋಟಿ ರೂ.ಕಾಮಗಾರಿ ಬಾಕಿ ಹಣ ನೀಡಬೇಕೆಂದರು. ಪ್ರತಿ ಇಲಾಖೆಯಲ್ಲು ಭ್ರಷ್ಟಾಚಾರವಿದೆ ಪಿಎಸ್ಐ ನೇಮಕಾತಿಯಲ್ಲಿ ಬಿಜೆಪಿ ಮಹಿಳಾ ಮುಖಂಡರು ಶಾಮೀಲಾಗಿದ್ದಾರೆಂದ ಅವರು ಬಿಜೆಪಿ ಸರ್ಕಾರ ದೇಶದಲ್ಲೆ ನಂ.1 ಭ್ರಷ್ಟ ಸರ್ಕಾರವೆಂದ ಅವರು ಬಿಜೆಪಿ ಸುಳ್ಳಿನ ಕಾರ್ಖಾನೆ ನಡೆಸುತ್ತಿದೆ , ಸಮಗ್ರ ತನಿಖೆಯಾದಲ್ಲಿ ಬಹುತೇಕ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದರು.ಭ್ರಷ್ಟಾಚಾರವನ್ನು ಮರೆ ಮಾಚಲು ಭಾವನಾತ್ಮಕ ವಿಷಯ ಮುಂಚೂಣಿಗೆ ತರಲಾಗುತ್ತಿದೆ ಕೋಮುಗಲಭೆ ಮಾಡಿಸಿ ದೇಶದಲ್ಲಿ ಒಡಕು ಮೂಡಿಸಲಾಗುತ್ತಿದೆ ಕೋಮುಗಲಭೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾದರೆ ಬಿಜೆಪಿ ಅದರ ದುರ್ಲಾಭ ಪಡೆಯುತ್ತದೆ ಎಂದರು.ಹುಬ್ಬಳಿ ಕೋಮುಗಲಭೆಗೆ ಪ್ರಚೋದನಾಕಾರಿ ಸಂದೇಶ ಕಾರಣವಾಗಿದೆ ತಪ್ಪಿತಸ್ಥರು ಯಾವುದೆ ಪಕ್ಷದವರಾಗಿದ್ದರು ಕ್ರಮಕೈಗೊಳ್ಳಿ ಎಂದರು. ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದರೆ ಸಾಲದು ಅಭಿವೃದ್ದಿಗೆ ಹಣ ನೀಡಬೇಕೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು,  ಶರಣಪ್ಪ ಮಟ್ಟೂರು, ಮಲ್ಲಿಕಾರ್ಜುನ್ ನಾಗಪ್ಪ, ಎ.ವಸಂತಕುಮಾರ, ಪಾರಸಮಲ್ ಸುಖಾಣಿ, ಹಂಪಯ್ಯ ನಾಯಕ,ಬಸವರಾಜ ಪಾಟೀಲ ಇಟಗಿ,ಬಸನಗೌಡ ಬಾದರ್ಲಿ, ಮಲ್ಲಿಕಾರ್ಜುನ ಯದ್ದಲದಿನ್ನಿ,ಬಸವರಾಜ ರೆಡ್ಡಿ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ