ಡಾ.ರಾಜಕುಮಾರ್ ಅವರ 93ನೇ ಜನ್ಮದಿನೋತ್ಸವ: ಸಾಧಕರಿಗೆ ಪ್ರಶಸ್ತಿ ಪ್ರದಾನ
ರಾಯಚೂರು,ಏ.25-ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಡಾ. ರಾಜಕುಮಾರ್ ಅವರ 93ನೇ ಜನ್ಮದಿನೋತ್ಸವದ ಅಂಗವಾಗಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಷ್ಠಿತ ಕನ್ನಡ ರತ್ನ ಪ್ರಶಸ್ತಿಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮೆರೆದ ಖ್ಯಾತ ನಿರೂಪಕರಾದ ಮುರಳೀಧರ್ ಕುಲಕರ್ಣಿಯವರಿಗೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ವಿಜಯ ವಾಣಿ ಪತ್ರಿಕೆ ಜಿಲ್ಲಾ ಪ್ರಧಾನ ವರದಿಗಾರರಾದ ಶಿವಮೂರ್ತಿ ಹೀರೆಮಠ ಹಾಗು ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಧ್ಯಕ್ಷರಾದ ನಾಡೋಜ ಮಹೇಶ ಜೋಷಿ, ಪ್ರೋ.ಚಂದ್ರಶೇಖರ್, ಬಸವರಾಜ ಕಳಸ, ರಂಗಣ್ಣ ಪಾಟೀಲ ಅಳ್ಳುಂಡಿ,ವೀರ ಹನುಮಾನ, ಮಲ್ಲೇಶ ಗಧಾರ,ಜೆ.ಎಲ್.ಗೋಪಿ,ಶಾಮಣ್ಣ ಮಾಚನೂರು, ವೆಂಕಟೇಶ ಬೇವಿನಬೆಂಚಿ,ಸಾವಿತ್ರಿ ಪುರುಷೋತ್ತಮ ಸೇರಿದಂತೆ ಅನೇಕರಿದ್ದರು.
Comments
Post a Comment