ನವಬೃಂದಾವನ ಗಡ್ಡೆ: ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ.
ನವಬೃಂದಾವನ ಗಡ್ಡೆ: ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ. ರಾಯಚೂರು,ಏ.20- ನವಬೃಂದಾವನ ಗಡ್ಡೆಯಲ್ಲಿ ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ ನೆರವೇರಿತು. ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಶ್ರೀ ವಾಗೀಶ ತೀರ್ಥರ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಿದರು ನಂತರ ಶ್ರೀಮನ್ಮೂಲರಾಮದೇವರ ಸಂಸ್ಥಾನ ಪೂಜೆ ನಡೆಯಿತು. ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment