ರವಿ ಬೋಸರಾಜು ಬುದ್ಧಿ ಭ್ರಮಣೆಯಾಗಿದೆ- ರವೀಂದ್ರ ಜಲ್ದಾರ್.
ರವಿ ಬೋಸರಾಜು ಬುದ್ಧಿ ಭ್ರಮಣೆಯಾಗಿದೆ- ರವೀಂದ್ರ ಜಲ್ದಾರ್. ರಾಯಚೂರು,ಏ.21-ಶಾಸಕ ಡಾ.ಶಿವರಾಜ ಪಾಟೀಲ್ ರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಬುದ್ದಿ ಭ್ರಮಣೆಯಾಗಿದ್ದು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ ಎಂದು ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಹೇಳಿದರು.ಇತ್ತೀಚೆಗೆ ರವಿ ಬೋಸರಾಜು ಶಾಸಕ ಡಾ.ಶಿವರಾಜ ಪಾಟೀಲರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ರಾಜ್ಯದಲ್ಲಿ 224 ಶಾಸಕರಲ್ಲಿ ನಂ.1 ಭ್ರಷ್ಟ ಶಾಸಕರೆಂದು ಆರೋಪಿಸಿದ್ದಾರೆ ಅದಕ್ಕೆ ದಾಖಲೆ ನೀಡಬೇಕೆಂದ ಅವರು ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರಿಗೆ ಶೇ.40 ರಷ್ಟು ಕಮೀಶನ್ ಯಾರು ಕೇಳುತ್ತಾರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದ ಆಗ್ರಹಿಸಿದ ರು. ರವಿ ಬೋಸರಾಜು ನಿರ್ದೇಶಕರಾಗಿರುವ ಅಮೃತ ಕನ್ಸಟ್ರಕ್ಷನ್ ಅನೇಕ ರಸ್ತೆ ಕಾಮಗಾರಿ ಮುಂತಾದ ಕಾಮಗಾರಿ ನಿರ್ವಹಿಸಿದ್ದು ಕಳಪೆಯಾಗಿದೆ ಈ ಬಗ್ಗೆ ಮಾಹಿತಿ ಪಡೆದು ದೂರು ನೀಡಲಾಗುತ್ತದೆ ಎಂದರು
ಜಿಲ್ಲಾಧಿಕಾರಿಗಳ ದಿಡೀರ್ ವರ್ಗಾವಣೆ ಬಗ್ಗೆ ನಮಗೆ ಅಸಮಧಾನವಿದೆ ಇದರಲ್ಲಿ ಶಾಸಕರ ಹಸ್ತಕ್ಷೇಪವಿಲ್ಲ ಆದರೂ ಅವರು ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದರು. ಶಾಸಕರು ನೂರಾರು ಕೋಟಿ ಅನುದಾನ ತಂದಿದ್ದಾರೆ ಅವರ ಬಗ್ಗೆ ಕೀಳು ಮಟ್ಟದಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದರು.ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ಟೀಕೆ ಮಾಡುವುದು ನೋಡಿದ್ದೇವೆ ಆದರೆ ಆದಾರ ರಹಿತ ಟೀಕೆ ಸಹಿಲು ಸಾಧ್ಯವಿಲ್ಲವೆಂದರು. ಈ ಸಂದರ್ಭದಲ್ಲಿ ಕಡಗೋಲ ಆಂಜಿನೇಯ್ಯ, ತಿಮ್ಮಪ್ಪ ನಾಡಗೌಡ,ಶ್ರೀನಿವಾಸರೆಡ್ಡಿ, ಶಶಿರಾಜ ಇದ್ದರು.
Comments
Post a Comment