ಮಲದಕಲ್ ಕ್ರಾಸ್ ಬಳಿ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್ ಮಾರ್ಗದ ಮಹಾದ್ವಾರ ಉದ್ಘಾಟನೆ

 ರಾಯಚೂರು,ಏ.23- ಇಂದು  ನಗರ ಶಾಸಕರಾದ ಡಾ.ಶಿವರಾಜ್  ಪಾಟೀಲ್ ಅವರು ನ್ಯಾಯಮೂರ್ತಿ ಶಿವರಾಜ್  ಪಾಟೀಲ್ ಇವರ 82ನೇ ಜನ್ಮದಿನೋತ್ಸವ ಶುಭ  ಸಂದರ್ಭದಲ್ಲಿ ಮಲದಕಲ್ ಕ್ರಾಸ್ ಬಳಿ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ . ವಿ. ಪಾಟೀಲ್ ಮಲ್ದಕಲ್ ಮಾರ್ಗದ ಮಹಾದ್ವಾರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ  ಉದ್ಘಾಟನೆ ನೆರವೇರಿಸಿದರು.  ಈ ಶುಭ ಸಂದರ್ಭದಲ್ಲಿ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಮಾತನಾಡಿ  ಇಂತಹ ಅರ್ಥ ಪೂರ್ಣವಾದ ಕಾರ್ಯಕ್ರಮದಲ್ಲಿ ಪಾಲುಗೊಂಡಿರುವುದು ಇದು ನನ್ನ ಹಿಂದಿನ ಜನ್ಮದ ಪುಣ್ಯ ಅನಿಸುತ್ತೆ ಕಾರಣ ಜಸ್ಟಿಸ್ ಶಿವರಾಜ್ ವಿ ಪಾಟೀಲ್ ಅವರು ಈ ದೇಶದಲ್ಲಿರುವ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಅವರು ಹುಟ್ಟಿ ಬೆಳೆದ ಗ್ರಾಮದಲ್ಲಿ ಇವತ್ತು ಇಲ್ಲಿಯ ಬಡ ಜನರಿಗೆ ಹಾಗೂ ಅವರ ಆರೋಗ್ಯದ ವ್ಯವಸ್ಥೆ ಮಾಡಬೇಕು ಅಂತಾ ಊರಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಮಾಡಿದ್ದಾರೆ ಜಸ್ಟಿಸ್ ಶಿವರಾಜ್ ವಿ ಪಾಟೀಲ್ ಅವರ ಹೆಸರಲ್ಲಿ ಕೇವಲ ಮಲದಕಲ ಕ್ರಾಸ್ ಗೆ ಅವರ ಹೆಸರಲ್ಲಿ ಮಹಾದ್ವಾರವನ್ನು ನಿರ್ಮಾಣ ಮಾಡೋದಕ್ಕಿಂತ ಇಡಿ ರಾಯಚೂರು ಜಿಲ್ಲೆಯ ಮಹಾದ್ವಾರಕ್ಕೆ ಅವರ ಹೆಸರು ಇಡಬೇಕಿತ್ತು ಎಂಬ ಭಾವನೆ ವ್ಯಕ್ತಪಡಿಸಿದ  ಅವರು ಇಡಿ ರಾಜ್ಯದ ದೊಡ್ಡ ದೊಡ್ಡ ನಾಯಕರಿಗೆ ಮಾರ್ಗದರ್ಶಕ್ಕರಾಗಿದ್ದಾರೆ  ನಮ್ಮ ಜಿಲ್ಲೆಯ ಅನೇಕ ನಾಯಕರು ರಾಯಚೂರು ಜಿಲ್ಲೆಯಿಂದ ದೆಹಲಿಗೆ ಹೋದಾಗ ಅಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಅನೇಕ ಕಾರ್ಯಕ್ರಮಗಳನ್ನು ಜಸ್ಟಿಸ್ ಶಿವರಾಜ್ ವಿ ಪಾಟೀಲ್ ಅವರ ಹೆಸರನ್ನು ಹೇಳಿ ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತೇವೆ    ಉದಾಹರಣಗೆ  ರಾಯಚೂರು ಜಿಲ್ಲೆಯ ವಿಮಾನ ನಿಲ್ದಾಣ ಹಾಗೂ ನಾಷನಲ್ ಹೈವೆಗಳು ಈ ತರಹ ದೊಡ್ಡ ದೊಡ್ಡ ಕೆಲಸಗಳು  ನಾನು ಅವರ ಸೇವೆ ಮತ್ತು ಅವರ ಮಾರ್ಗದರ್ಶನದಲ್ಲಿ ಯಾವತ್ತಿಗೋ ನಡೆದು ಕೊಳ್ಳುತ್ತೇನೆ ಎಂದು ನಗರ ಶಾಸಕರು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಗಬ್ಬೂರು   ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು  ಮತ್ತು ಶ್ರೀ ಬೆಟ್ಟದಯ್ಯಪ್ಪ  ಜಾಗಟಗಲ್ ರವರು ವಹಿಸಿದ್ದರು.ಈ ಸಂದರ್ಭದಲ್ಲಿ  ಸಂಸದರಾದ ರಾಜಾ ಅಮರೇಶ್ವರ ನಾಯಕ , ಜೆ.ಡಿ.ಎಸ್ ಮುಖಂಡರಾದ ಕರಿಯಮ್ಮ ನಾಯಕ  , ವಿಶೇಷ ಆಹ್ವಾನಿತರಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಅಧ್ಯಕ್ಷರಾದ  ನಾಡೋಜ ಡಾ. ಮಹೇಶ್ ಜೋಶಿ,   ಸ್ಪರ್ಶ ಆಸ್ಪತ್ರೆ ಸಮೂಹ ಬೆಂಗಳೂರು ಹಾಗೂ ಗ್ರಾಂ.ಪಂ.ಅಧ್ಯಕ್ಷರಾದ  ಲಕ್ಷ್ಮೀ ಮರೆಣ್ಣ  ನಾಯಕ   ಸೇರಿದಂತೆ ಗ್ರಾ.ಪಂ  ಸದಸ್ಯರು, ಗ್ರಾಮದ ಹಿರಿಯರು, ಮಹಿಳೆಯರು ಮತ್ತು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ