ಯುವ ಪೀಳಿಗೆಗೆ ರಾಷ್ಟ್ರರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು- ರಮಾನಂದಗೌಡ.

 ಯುವ ಪೀಳಿಗೆಗೆ ರಾಷ್ಟ್ರರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು- ರಮಾನಂದಗೌಡ.                    ರಾಯಚೂರು,ಏ.27-ಯುವ ಪೀಳಿಗೆಗೆ ರಾಷ್ಟ್ರರಕ್ಷಣೆಯ ಜಾಗೃತಿ ಮೂಡಿಸಬೇಕೆಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ರಮಾನಂದಗೌಡ ಹೇಳಿದರು. ಅವರು ಮಂಗಳವಾರ ಸಂಜೆ ನಗರದ ವಾಸವಿನಗರದ ಗುರುಕಲಾ  ಮಂದಿರದಲ್ಲಿ ನಡೆದ  ಚಿಂತನ ಬೈಠಕ್ ನಲ್ಲಿ ಮಾತನಾಡಿದರು. ಭಾರತಕ್ಕೆ ತನ್ನದೆಯಾದ ಅಗ್ರ ಸ್ಥಾನವಿದೆ ಪ್ರಪಂಚದಲ್ಲಿ, ಅದಕ್ಕೆ ಮುಖ್ಯ ಕಾರಣ ಇಲ್ಲಿನ ವೈಚಾರಿಕತೆ ಮತ್ತು ಸಂಸ್ಕೃತಿಯಾಗಿದ್ದು ರಾಷ್ಟ್ರ ಸಂರಕ್ಷಣೆಯಲ್ಲಿ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕೆಂದರು.ಹಿಂದುತ್ವ ಎಂದರೆ ಸಾತ್ವಿಕತೆ ಎಲ್ಲರನ್ನು ಒಂದೆ ತರನಾಗಿ ಕಾಣುವುದು ರಜೋ ,ತಮ ಗುಣ ಕಡಿಮೆಯಿರುವವರು ಯಾರೆ ಆಗಿದ್ದರು ಅವರು ಹಿಂದು ಆಗಿರುತ್ತಾರೆಂದರು. ಶಾರಿರಿಕ ಮತ್ತು ವೈಚಾರಿಕ ಹಾಗೂ ಆಧ್ಯಾತ್ಮಿಕತೆಯಿಂದ ರಾಷ್ಟ್ರ ರಕ್ಷಣೆ ಸಾಧ್ಯವೆಂದರು. ಕಾನೂನು ಎಲ್ಲರಿಗೂ ಒಂದೆ ಅದನ್ನು ಯಾರು ಸಹ ಮುರಿಯಬಾರದೆಂದರು.ಮಹಾಭಾರತದಲ್ಲಿ ಕೌರವರು ಪಾಂಡವರು ಇಬ್ಬರು ಇದ್ದರು, ಒಳ್ಳೆ ಗುಣಗಳುಳ್ಳ ಪಾಂಡವರ ಹಿಂದೆ ಕೃಷ್ಣ ನಿಂತನು ಎಂದ ಅವರು ಹಿಂದೂ ಸ್ವರಾಜ್ಯ  ಸ್ಥಾಪನೆ ಮಾಡಲು ಮುಂದಾದ ಶಿವಾಜಿ ಮಹಾರಾಜರ ಹಿಂದೆ ಸಮರ್ಥ ರಾಮದಾಸರು ಮಾರ್ಗದರ್ಶನ ಮಾಡಿದ್ದ ರೆಂದರು. ಹಿಂದೂ ಜನ ಜಾಗೃತಿ ಸಮಿತಿ ಬಾಗಲಕೋಟಿ ಜಿಲ್ಲಾ ಸಮನ್ವಯಕಾರರಾದ ವೆಂಕಟರಮಣ ನಾಯಕ ಮಾತನಾಡಿ ಸನಾತನ ಸಂಸ್ಥೆ ಹಿಂದುತ್ವದ ಜಾಗೃತಿಗಾಗಿ ಶ್ರಮಿಸುತ್ತಿದ್ದು ಹಿಂದುಗಳ ಮೇಲೆ ಮತ್ತು ಹಿಂದುತ್ವದ ಆಚರಣೆ ಮೇಲೆ ದಾಳಿ ಖಂಡಿಸುತ್ತದೆ ಎಂದ ಅವರು ಹುಬ್ಬಳ್ಳಿ ಘಟನೆ ಅತ್ಯಂತ ಖಂಡನೀಯವೆಂದರು. ಈ ಸಂದರ್ಭದಲ್ಲಿ ಡಾ.ಆನಂದ ಫಡ್ನೀಸ್,ವಿಠೋಭರಾವ್ ,ಸನಾತನ ಸಂಸ್ಥೆಯ ಡಾ.ರೂಪಾಬಾಯಿ ಫಡ್ನೀಸ್ ಸೇರಿದಂತೆ ಅನೇಕರು ಪಾಲಗೊಂಡಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ