ಮರೆಯಾಗಿ ಮನಸಿಗೆ ಘಾಸಿಗೊಳಿಸಿ ಹೋದಳು.
ಮರೆಯಾಗಿ ಮನಸಿಗೆ ಘಾಸಿಗೊಳಿಸಿ ಹೋದಳು.. ಸದಾ ನಳಿನಳಿಸುವ ಅವಳ ಮೊಗವು ಅಂದೇಕೋ ಬಾಡಿತ್ತು... ಕಳೆಯಿಲ್ಲದ ಮುಖದಲ್ಲಿ ಕವಿದಿತ್ತು ಕಹಿ ಕಾರ್ಮೋಡ..... ಮಾತಿಲ್ಲದೆ ಮೌನಕ್ಕೆ ಜಾರಿದ್ದಳು ಮುಖಕ್ಕೆ ಮುಖ ನೀಡಿ ಮಾತನಾಡದೆ ಎಲ್ಲವು ಅಂತ್ಯವಾಗಿತ್ತು.... ಅವಳ ಮುಖವು ದೂರವಾಯಿತು ಉಳಿಯಿತು ಕೇವಲ ಸುಮಧುರ ನೆನಪುಗಳು ಮಾತ್ರ.. ವಿಧಿಯ ಕೆಟ್ಟ ಆಟ ನಮ್ಮೋಡನಾಟ ಕಿತ್ತುಕೊಂಡಿತು ... ಚಂದ್ರವೆಂಬ ಆಕೃತಿಗೆ ಮೋಡಕವಿದು ಆಚೆ ಬರದೆ ಅಲ್ಲೆ ಠಿಕಾಣಿ ಹೂಡಿತು.... ಪ್ರತಿ ನಿಮಿಷಕ್ಕೂ ನೆನಪಿಸುವ ಅವಳ ಒಂದೊಂದು ವಾಕ್ಕುಸುಮಗಳು ಇಂದು ಕನಸ್ಸಿನಲ್ಲಿ ಕನವರಿಕೆಯಾಗಿವೆ.... ಅನ್ಯೋನ್ಯತೆ ಮರೆಯಾಗಿ ಆಕ್ರೋಶ ಮನ ಮಾಡಿದೆ... ಚೂರಾಯಿತು ಸುಂದರ ಕನ್ನಡಿ ಒಂದೆ ಏಟಿಗೆ ಮತ್ತೆ ಕೂಡದ ಹಾಗೆ ನೂರಾರು ಚೂರಾಗಿದೆ.... ಕಳೆಯಿತು ಒಂದು ಸುಂದರ ಅವಿಸ್ಮರಣೀಯ ಗಳಿಗೆ.. ಮತ್ತೆ ಒಂದಾದರೆ ಅದು ಪವಾಡ ಈಗ ಕೇವಲ ಹೀಗಾಗಬಾರದಿತ್ತು ಎಂಬ ಖೇದ..ಖೇದ ..ಬರಿ ಖೇದ..
Comments
Post a Comment