ಶಾಂತಪ್ಪ ಬಾಡದ್ ರವರಿಗೆ ಅರಷಣಗಿ ಗ್ರಾಮಸ್ಥರಿಂದ ಸನ್ಮಾನ
ರಾಯಚೂರು,ಏ.30- ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆಯ ಗೌರವ ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಶಾಂತಪ್ಪ ಬಾಡದ್ ಅವರಿಗೆ ತನ್ನ ಜನ್ಮ ಭೂಮಿಯಾದ ಅರಷಿಣಿಗಿ ಗ್ರಾಮದಲ್ಲಿ ಶ್ರೀ ಅಂಬಾ ಮಹೇಶ್ವರಿ ಬಯಲು ನಾಟ್ಯ ಸಂಘ ಹಾಗೂ ಸಾಮಾಜಿಕ ನಾಟ್ಯಸಂಘ ಅರಷಣಗಿ ಗ್ರಾಮದ ಸಕಲ ಕಲಾವಿದರ ವತಿಯಿಂದ ಗ್ರಾಮಸ್ಥರಿಂದ ಸನ್ಮಾನ ನಡೆಯಿತು. ಪಾಂಡುರಂಗ ಕಾಡ್ಲೂರು ಮಾತನಾಡಿ,ಈಗಿನ ಕಾಲಮಾನದಲ್ಲಿ ನಶಿಸಿಹೋಗುವ ಪೌರಾಣಿಕ, ಬಯಲಾಟ, ನಾಟಕಗಳು ಅದನ್ನು ಮೈಗೂಡಿಸಿಕೊಂಡು ಒಳ್ಳೆಯ ಅಭಿನಯವನ್ನು ಮಾಡುವುದರ ಮೂಲಕ ,ಪ್ರತಿಭೆಯನ್ನು ಹೊರಹಾಕಿ ,ಇಂದಿನಯುವಪೀಳಿಗೆಗೆ ಮಾರ್ಗದರ್ಶಿಯಾದ, ಬಾಗಲಕೋಟೆಯ ಸಚಿವರು ಮತ್ತು ಶಾಸಕರಿಂದ ಸನ್ಮಾನ ಸ್ವೀಕಾರಗೊಂಡಂತಪ್ರಶಸ್ತಿಗೆ ಭಾಜನರಾದ ,ಗ್ರಾಮದ ಹೆಸರು ಕೀರ್ತಿ ತರುವುದರಲ್ಲಿ ತಮ್ಮ ಸೇವೆ ಅತ್ಯಂತ ಮಹತ್ವವಾದುದು ಎಂದರು .
*ಈ ಒಂದು ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಊರಿನ ಮುಖಂಡರಾದ ,ಟಿ* *ತಾಯಪ್ಪ ,ಮಲ್ಲಪ್ಪಗೌಡ ,ಮಲ್ಲಿಕಾರ್ಜುನ ಸ್ವಾಮಿ ವೀರಭದ್ರಯ್ಯಸ್ವಾಮಿ ದೇವಪ್ಪ ಬಾಡದ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಎಂ ಡಿ ಸಾದಿಕ್ ,ಗ್ರಾಮ ಪಂಚಾಯಿತಿಯ ಸದಸ್ಯರಾದ ಗಂಗಪ್ಪ ,ಬಸವರಾಜ ಪೂಜಾರಿ ,ಮೀನುಗಾರರ ಸಂಘದ ಅಧ್ಯಕ್ಷರಾದ ಜಂಗ್ಲೆಪ್ಪ ರಾಯಚೂರು , ಜಮ್ಸೇರಲಿ ಕೊತ್ವಾಲ್ ಕಾಡ್ಲೂರ್, ತಿಮ್ಮಣ್ಣ ಕಾಡ್ಲೂರ್ ರಾಜು ಬಾಡದ,ಊರಿನ ಯುವಕರು ಹಿರಿಯ ಮುಖಂಡರು ಎಲ್ಲರೂ ಭಾಗಿಯಾಗಿ ಗೌರವ *ಸಮರ್ಪಣೆಯನ್ನು* *ಮಾಡಿದರು ,ದೇವಿಂದ್ರಪ್ಪ ಮಾಸ್ತರ್* *ಸ್ವಾಗತಿಸಿ, ನಿರೂಪಿಸಿ, ವಂದಿಸಿದರು*
Comments
Post a Comment