ಪುಸ್ತಕ ಓದುವ ಹವ್ಯಾಸದಿಂದ ಜ್ಞಾನಾರ್ಜನೆ- ಜಿ.ಪಂ ಸಿಇಓ ನೂರ್ ಜಹರಾ ಖಾನಂ.
ಪುಸ್ತಕ ಓದುವ ಹವ್ಯಾಸದಿಂದ ಜ್ಞಾನಾರ್ಜನೆ- ಜಿ.ಪಂ ಸಿಇಓ ನೂರ್ ಜಹರಾ ಖಾನಂ. ರಾಯಚೂರು,ಏ.23-ಪುಸ್ತಕ ಓದುವ ಹವ್ಯಾಸದಿಂದ ಜ್ಞಾನಾರ್ಜನೆ ಸಾಧ್ಯವೆಂದು ಜಿ.ಪಂ ಸಿಇಓ ನೂರ ಜಹರಾ ಖಾನಂ ಹೇಳಿದರು. ಅವರಿಂದು ನಗರದ ರಂಗಮಂದಿರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗದಿಂದ ನಡೆದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು . ಸರ್ಕಾರ ರಾಜ್ಯದಲ್ಲಿ ಡಿಜಿಟಲ್ ಲೈಬ್ರರಿ ಪ್ರಾರಂಭಿಸಿದ ನಂತರ 2.35 ಕೋಟಿ ಜನರು ಓದುಗರಾಗಿದ್ದಾರೆ ಜಿಲ್ಲೆಯಲ್ಲಿ 16 ಲಕ್ಷ ಡಿಜಿಟಲ್ ಓದುಗರಿದ್ದಾರೆಂದರು. ಪುಸ್ತಕಗಳಿಂದ ಹಳೆಯ ಸಂಗತಿಗಳ ಬಗ್ಗೆ ತಿಳಿವಳಿಕೆ ಮೂಡುತ್ತದೆ ಎಂದ ಅವರು ತಾಳೆಗರಿ, ಶಾಸನ, ಪುಸ್ತಕ ಮುಂತಾದವುಗಳಿಂದ ಗತ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದಂತಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಕೆ.ದುರ್ಗೇಶ ಮಾತನಾಡಿ ವಿಶ್ವ ಪುಸ್ತಕ ದಿನ ಅಂಗವಾಗಿ ನಡೆದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಎಸ್.ಹೊಸಮನಿ ಮಾತನಾಡಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲಾಗಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ್ಯ, ಡಾ.ಎ.ವೈ.ಅಸುಂಡಿ, ಟಿ.ಮಲ್ಲೇಶಪ್ಪ, ಪಿ.ವೈ.ರಾಜೇಂದ್ರ ಕುಮಾರ್,ಡಾ.ಪಿ.ವಿ.ಕೊಣ್ಣೂರು, ಎಂ.ಎಸ್.ರೆಬಿನಾಳ , ನಗರಸಭೆ ಸದಸ್ಯ ಜಯಣ್ಣ,ಭೀಮನಗೌಡ ಇಟಗಿ,ಮಲ್ಲೇಶ ಕೊಲಮಿ,ಸೈಯದ್ ಹಫೀಜುಲ್ಲ ಇತರರು ಇದ್ದರು.
Comments
Post a Comment