ಕರ್ನಾಟಕ ಸಂಘದ ಅಭಿವೃದ್ದಿಗೆ ಬದ್ಧ- ಡಾ.ಶಿವರಾಜ ಪಾಟೀಲ

  ರಾಯಚೂರು,ಏ.23-  ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಬಯಲು ರಂಗಮಂದಿರದ ಅಗತ್ಯವಿದ್ದು, ಕರ್ನಾಟಕ ಸಂಘದ ಅಭಿವೃದ್ಧಿಗೆ ಅನುದಾನ ಒದಗಿಸುವ ಭರವಸೆಯನ್ನು ಶಾಸಕ ಡಾ.ಎಸ್.ಶಿವರಾಜ.ಪಾಟೀಲ್ ಅವರು ನೀಡಿದರು.


ಅವರಿಂದು ಕರ್ನಾಟಕ ಸಂಘದಿಂದ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ಶಾಸಕನಾಗಿದ್ದ ಎರಡು ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇನೆ. ಇದು ಚುನಾವಣೆ ವರ್ಷವಾಗಿದ್ದರಿಂದ ಕರ್ನಾಟಕ ಸಂಘದ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಲು ಸಾಧ್ಯವೇ ಅಷ್ಟು ನೀಡುವ ಭರವಸೆ ನೀಡಿದರು.


ನಗರಸಭೆ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ನಗರಸಭೆ ಸದಸ್ಯರು ಇದೇ ಭಾಗಕ್ಕೆ ಸೇರಿದವರಾಗಿದ್ದರಿಂದ ಇವರು ತಮಗೆ ಸಾಧ್ಯವಾದ ಅನುದಾನವನ್ನು ನೀಡಲು ಸೂಚಿಸಿದರು.


ಕರ್ನಾಟಕ ಸಂಘದಲ್ಲಿ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ಅನುದಾನ ಒದಗಿಸುವಂತೆಯೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಕೇಳಿದ ಅವರು, ಸಾಹಿತ್ಯ ಚಟುವಟಿಕೆಗಳಿಂದ ಜೀವನ ಕಲಿಯುವ ಅನೇಕ ಅನುಭವ ದೊರೆಯಲಿವೆ. ಸಾಹಿತ್ಯ ಚಟುವಟಿಕೆಗಳು ನಮ್ಮ ಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಬೇಕು. ಇದರಿಂದ ಜನರ ಸಾಂಸ್ಕೃತಿಕ ಮಟ್ಟವೂ ಹೆಚ್ಚಲಿದೆ. ಸಾಹಿತ್ಯ ಚಟುವಟಿಕೆಗಳಿಗೆ ಏನೆಲ್ಲಾ ಅಗತ್ಯ ನೆರವು ನೀಡಲು ಸಾಧ್ಯವೋ ಅದನ್ನು ಒದಗಿಸುವ ಪ್ರಯತ್ನ ನನ್ನದಾಗಿರುತ್ತದೆಂದರು.

ರಾಯಚೂರು ನಗರ ಶೇ.40ರಷ್ಟು ಸರ್ಕಾರಿ ಸ್ಥಳದಲ್ಲಿಯೇ ಇದೆ. ಕರ್ನಾಟಕ ಸಂಘ ನಗರದ ಮಧ್ಯ ಭಾಗದಲ್ಲಿದ್ದು, ಇದನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಹೆಚ್ಚಿನ ಚಟುವಟಿಕೆ ನಡೆಸಲು ಆಡಳಿತ ಮಂಡಳಿ ಶ್ರಮ ವಹಿಸಬೇಕೆಂದು ಹೇಳಿದರು.ಶಾಸಕರಿಗೆ, ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಲ ಆಂಜಿನೇಯ್ಯ ಮತ್ತು ಆರ್‌.ಡಿ.ಎ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ, ನಗರಸಭಾ ಸದಸ್ಯರಾದ ಈ ಶಶಿರಾಜ್,ರವೀಂದ್ರ ಜಲ್ದಾರ್, ಕಡಗೋಲ ಆಂಜನೇಯ, ತೇಜಪ್ಪ ಅವರನ್ನು ಸನ್ಮಾನಿಸಲಾಯಿತು. 

ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಶಾಂತಪ್ಪ,  ಅರವಿಂದ್ ಕುಲಕರ್ಣಿ, ಶ್ರೀನಿವಾಸ ಗಟ್ಟು,ಹನುಮಂತು ಯಾದವ್, ಗಿರಿಧರ್, ಮುರಳಿಧರ ಕುಲಕರ್ಣಿ, ಕರಿಯಪ್ಪ ಮಾಸ್ಟರ್ ಅವರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್