ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ನಿಲ್ಲಿಸಲಿ-ಪ್ರಹ್ಲಾದ ಜೋಷಿ.

 ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ನಿಲ್ಲಿಸಲಿ-ಪ್ರಹ್ಲಾದ ಜೋಷಿ.                                              ರಾಯಚೂರು,ಏ.22- ಕೋಮು ಗಲಭೆಯಲ್ಲಿ ಪಾಲ್ಗೊಳ್ಳುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಕಾಂಗ್ರೆಸ್ ಪಕ್ಷ ತುಷ್ಟಿಕರಣ ರಾಜಕಾರಣ     ನಿಲ್ಲಿಸಬೇಕೆಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಷಿ ಹೇಳಿದರು .ಅವರಿಂದು ನಗರದ ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹುಬ್ಬಳ್ಳಿ ಕೋಮುಗಲಭೆಯಲ್ಲಿ ಪಾಲ್ಗೊಂಡ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಈ ದುಶ್ಕೃತ್ಯದಲ್ಲಿ ಭಾಗಿಯಾದವರು ಯಾರೆಯಾದರು ಅವರನ್ನು ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಡಿಜೆ ಹಳ್ಳಿ ಕೆಜೆ ಹಳ್ಳಿ ಘಟನೆ ಮಾದರಿಯಲ್ಲಿ ಹುಬ್ಬಳ್ಳಿ ಘಟನೆ ಮಾಡುವ  ಹುನ್ನಾರವಿತ್ತು ಅದನ್ನು ಪೊಲೀಸರು ವಿಫಲಗೊಳಿಸಿದ್ದಾರೆಂದರು. ಮತಾಂಧರು ಗಲಭೆ ಸೃಷ್ಟಿಸುವದು ಸರಿಯಲ್ಲವೆಂದರು.ಕೋಮು ಗಲಭೆಯ ಲಾಭ ನಷ್ಟದ ಕೀಳು ಮನಸ್ಥಿತಿ ಹೋಗಬೇಕೆಂದ ಅವರು ದೆಹಲಿಯಲಿ ಸರ್ಕಾರಿ ಜಾಗ ಒತ್ತುವರಿ ವಿರುದ್ಧ ಬುಲ್ಡೋಜರ್ ಕಾರ್ಯಚರಣೆಗಿಳಿದಿವೆ ಕೇಜ್ರಿವಾಲರವರ ಆರೋಪದಂತೆ ಬಡವರ ಮೇಲೆ ಬುಲ್ಡೋಜರ್ ಹತ್ತಿಸಿಲ್ಲವೆಂದರು.ಆರ್ ಟಿ ಪಿ ಎಸ್ ಕಲ್ಲಿದ್ದಲು ಸಮಸ್ಯೆ ನಿವಾರಿಸಲಾಗುತ್ತದೆ ಎಂದರು.ಬೇಸಿಗೆ ಹಿನ್ನಲೆ ವಿದ್ಯುತ್ ಬೇಡಿಕೆ ಹೆಚ್ಚಿದೆ ವಿದ್ಯುತ್ ಕೊರತೆ ಕೊಂಚ ಮಟ್ಟಿಗಿದೆ ಎಂದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ