ಸನ್ನತ್ತಿ ಶ್ರೀ ಚಂದ್ರಲಾಂಬ ಜಾತ್ರೆ ಅಂಗವಾಗಿ ಮಹಾರಥೋತ್ಸವ
ಸನ್ನತ್ತಿ ಶ್ರೀ ಚಂದ್ರಲಾಂಬ ಜಾತ್ರೆ ಅಂಗವಾಗಿ ಮಹಾರಥೋತ್ಸವ. ರಾಯಚೂರು,ಏ.21- ಯಾದಗಿರಿ ಜಿಲ್ಲೆಯ ಪ್ರಸಿಧ್ಧ ಶ್ರೀ ಕ್ಷೇತ್ರ ಸನ್ನತ್ತಿಯಲ್ಲಿ ಶ್ರೀ ಚಂದ್ರಲಾಂಬ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಸಾಯಿಂಕಾಲ ಮಹಾರಥೋತ್ಸವ ನೆರವೇರಿತು.ದೇವಸ್ಥಾನದ ಆವರಣದಲ್ಲಿ ಪುಷ್ಪಾಲಂಕೃತ ರಥದಲ್ಲಿ ಪಲ್ಲಕ್ಕಿಯಲ್ಲಿ ತರಲಾದ ಚಂದ್ರಲಾಂಬ ದೇವಿಯ ಮೂರ್ತಿ ಕುಳ್ಳಿರಿಸಿ ಮಹಾರಥೋತ್ಸವ ನೆರವೇರಿತು. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ನೆರಯ ರಾಜ್ಯದಿಂದಲು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ನಂತರ ಮಹಾ ಪ್ರಸಾದ ವಿನಿಯೋಗಿಸಲಾಯಿತು.
Comments
Post a Comment