ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ.
- Get link
- X
- Other Apps
ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ. ರಾಯಚೂರು,ಏ.20-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಬೆಳಿಗ್ಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈಶ್ವರ ಖಂಡ್ರೆ ಮಾತನಾಡಿ ಶೇ.40 ರಷ್ಟು ಕಮೀಶನ ನೀಡಬೇಕೆಂದು ಈಶ್ವರಪ್ಪ ಬೇಡಿಕೆಯಿಟ್ಟಿದ್ದರಿಂದ ಗುತ್ತಿಗೆದಾರಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕೂಡಲೆ ಈಶ್ವರಪ್ಪರವರನ್ನು ಪೊಲೀಸರು ಬಂಧಿಸಬೇಕೆಂದರು.ಅವರು ರಾಜೀನಾಮೆ ನೀಡಿದರೆ ಸಾಲದು ಪ್ರಕರಣದಲ್ಲಿ ಅವರು ಪ್ರಮುಖವಾಗಿ ಭಾಗಿಯಾಗಿರುವುದರಿಂದ ಸಾಕ್ಷಿ ನಾಶ ಮಾಡುವ ಸಂಭವ ಇರುವುದರಿಂದ ಅವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ , ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ ಇಟಗಿ , ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎ.ವಸಂತ ಕುಮಾರ, ಮಾಜಿ ಶಾಸಕರಾದ ಹಂಪಯ್ಯ ನಾಯಕ,ಸೈಯದ್ ಯಾಸೀನ್,ಸಿರಾಜ ಶೇಕ್, ಪಾರಸಮಲ್ ಸುಖಾಣಿ, ರವಿ ಬೋಸರಾಜು, ಜಯವಂತರಾವ ಪತಂಗೆ,ರಾಜಶೇಖರ ನಾಯಕ, ದೇವಣ್ಣ ನಾಯಕ,ಬಸನಗೌಡ ಬಾದರ್ಲಿ, ಅಸ್ಲಂ ಪಾಷಾ, ಕೆ.ಶಾಂತಪ್ಪ, ಜಿ.ಬಸವರಾಜ ರೆಡ್ಡಿ, ಜಯಣ್ಣ, ತಾಯಣ್ಣ ನಾಯಕ,ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಬ್ದುಲ ಕರೀಂ, ಅಮರೇಗೌಡ ಹಂಚಿನಾಳ,ಎಂ.ಕೆ.ಬಾಬರ್,ಫಾರೂಕ್ ಸೇರಿದಂತೆ ಮಹಿಳಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿದ್ದರು.
- Get link
- X
- Other Apps
Comments
Post a Comment