ನನ್ನ ಪುತ್ಥಳಿ ಬದಲು ಸಾಧಕರ ಪ್ರತಿಮೆ ಸ್ಥಾಪಿಸಿ-ಸುದೀಪ್
ನನ್ನ ಪುತ್ಥಳಿ ಬದಲು ಸಾಧಕರ ಪ್ರತಿಮೆ ಸ್ಥಾಪಿಸಿ-ಸುದೀಪ್. ರಾಯಚೂರು,ಏ.27-ನಾನು ಕೇವಲ ಚಿತ್ರನಟನಾಗಿದ್ದು ನನ್ನ ಪ್ರತಿಮೆ ಬದಲಿಗೆ ಸಾಧಕರ ಪ್ರತಿಮೆ ಸ್ಥಾಪಿಸಲು ನಾನು ಅಭಿಮಾನಿಗಳಿಗೆ ಕೋರುತ್ತೇನೆಂದು ಕನ್ನಡ ಚಿತ್ರ ರಂಗದ ಖ್ಯಾತ ನಾಯಕ ನಟ ಸುದೀಪ್ ಹೇಳಿದರು .ಅವರಿಂದು ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ಅಭಿಮಾನಿಗಳು ಸ್ಥಾಪಿಸಿರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಸ್ಥಾಪನೆ ಕರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನಾನಿನ್ನು ಸಾಧಿಸಬೇಕಾಗಿದ್ದು ಬಹಳಯಿದೆ ಸಮಾಜದಲ್ಲಿ ಅನೇಕ ಮಹನೀಯರು, ಸಾಧಕರಿದ್ದಾರೆ ಅವರ ಪುತ್ಥಳಿ ಸ್ಥಾಪಿಸಿ ಎಂದು ಕರೆ ನೀಡಿದ ಅವರ ತಮ್ಮ ಪುತ್ಥಳಿ ಸ್ಥಾಪನೆ ಮಾಡಬೇಡಿ ಎಂದರು.ಅಪ್ಪು ನಮ್ಮನ್ನೆಲ್ಲ ಅಗಲಿದ್ದು ಅತೀವ ದುಃಖದ ಸಂಗತಿಯಾಗಿದ್ದು ಅವರ ಸಾಧನೆ ನಮಗೆಲ್ಲ ಮಾದರಿಯಾಗಿದೆ ಎಂದರು. ಪರಿಶಿಷ್ಟ ಪಂಗಡಕ್ಕೆ ಶೆ.7.5 ರಷ್ಟು ಮೀಸಲಾತಿ ನೀಡಬೇಕೆಂಬ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಹೋರಾಟನಿರತ ಸ್ವಾಮಿಗಳಿಗಿದೆ ಎಂದರು. ಸುದೀಪ್ ರನ್ನು ನೋಡಲು ಬಂದ ಜನರ ನೂಕು ನುಗ್ಗಲು ನಿಭಾಯಿಸಲು ಪೊಲೀಸರು ಹರ ಸಾಹಸ ಪಟ್ಟರು.
Comments
Post a Comment