ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ- ಸಚಿವ ಆಚಾರ ಹಾಲಪ್ಪ
ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ- ಸಚಿವ ಆಚಾರ ಹಾಲಪ್ಪ
ರಾಯಚೂರು ಏ.29- ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಏ.29ರ ಶುಕ್ರವಾರ ದಂದು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಪರಿವೀಕ್ಷಣೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಂಪನಿಯ ಕಾರ್ಮಿಕರಿಗೆ ಆರೋಗ್ಯದ ಸಮಸ್ಯೆಯಾದಲ್ಲಿ ಚಿಕಿತ್ಸೆ ವೆಚ್ಚವನ್ನು ಕಂಪನಿ ವತಿಯಿಂದ ಭರಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗವನ್ನು ಒಗ್ಗೂಡಿಸಿ ಹೊದಲ್ಲಿ ಮಾತ್ರ ಕಂಪನಿ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಮಿಕರಿಗೆ ಕಾಲಕಾಲಕ್ಕೆ ಅಗತ್ಯ ಸೌಕರ್ಯಗಳನ್ನು ನೀಡಬೇಕು ಹಾಗೂ ಕಂಪನಿಯ ಮೇಲಾಧಿಕಾರಿಗಳು ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳುವ ಮೂಲಕ ಕಾರ್ಯವನ್ನು ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿದಿನ 400ರಿಂದ 500ಜನರಿಗೆ ಚಿಕಿತ್ಸೆ ವ್ಯವಸ್ಥೆ: ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯು 120 ಹಾಸಿಗೆಯ ಸಾಮರ್ಥ್ಯದ ಸೌಲಭ್ಯವನ್ನು ಹೊಂದಿದ್ದು, ಆಸ್ಪತ್ರೆಯಲ್ಲಿ ಕಂಪನಿಯ ನೌಕರರು ಹಾಗೂ ಅವಲಂಬಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರತಿದಿನ ಸುಮಾರು 400-500 ಹೊರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಂಪನಿಯ ಆಸ್ಪತ್ರೆಯು ಸುಸಜ್ಜಿತವಾದಂತಹ ಮೈನರ್ ಹಾಗೂ ಮೇಜರ್ ಶಸ್ತ್ರ ಚಿಕಿತ್ಸೆ ಘಟಕ, ಡಿಜಿಟಲ್ ಎಕ್ಸರೇ, ಅಲ್ಯಾ ಸೋನೋಗ್ರಫಿ, ರಕ್ತ ಭಂಡಾರ,ಲ್ಯಾಬೋರೇಟರಿ, ಡಯಾಲಸೆಸ್ ಯುನಿಟ್, ಹಾಗೂ ಡೇ ಕೇರ್ ಸೆಂಟರ್ ಸೌಲಭ್ಯಗಳನ್ನು ಹೊಂದಿದೆ ಎಂದು ಗಣಿ ವ್ಯವಸ್ಥಾಪಕರು ಸಚಿವರಿಗೆ ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಪ್ರಸ್ತುತ 10 ಖಾಯಂ ಮತ್ತು 09 ಗುತ್ತಿಗೆ ವೈದ್ಯರು ಆರ್ಥೋಪೆಡಿಕ್ಸ್, ಅರಿವಳಿಕೆ, ಜನರಲ್ ಸರ್ಜರಿ, ಮೆಡಿಸಿನ್, ಇಎನ್‌ಟಿ, ಡರ್ಮಟಾಲಜಿ ಮತ್ತು ಪೀಡಿಯಾಟ್ರಿಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ 125 ಪ್ಯಾರಾ ಮೆಡಿಕಲ್ ಮತ್ತು ಇತರೆ ಸಿಬ್ಬಂದಿ ಮತ್ತು ಕಾರ್ಮಿಕರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಜನೌಷಧಿ ಕೇಂದ್ರದಿAದ ಸುಮಾರು 3900 ಉದ್ಯೋಗಿಗಳು ಮತ್ತು ಅವರ ಅವಲಂಬಿತರಿಗೆ ಔಷಧಿಗಳನ್ನು ಪೂರೈಸಲಾಗುತ್ತಿದ್ದು, 100 ಹಾಸಿಗೆಯ ಸಾಮರ್ಥ್ಯವುಳ್ಳ ಕೋಡ್ ಕೇರ್ ಸೆಂಟರ್ ಮತ್ತು 500ನ ಉತ್ಪಾದನಾ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.
788ವಿದ್ಯಾರ್ಥಿಗಳಿಗೆ ಶಿಕ್ಷಣ: ಹಟ್ಟಿ ಚಿನ್ನದ ಗಣಿ ಕಂಪನಿಯು ಸಂಪೂರ್ಣ ಅನುದಾನಿತ ಕೇಂದ್ರೀಯ ವಿದ್ಯಾಲಯವನ್ನು ಹೊಂದಿರುತ್ತದೆ. ಈ ವಿದ್ಯಾಲಯವು 2015ರಿಂದ ಸೇವೆ ಸಲ್ಲಿಸುತ್ತಿದ್ದು, ಮುಖ್ಯವಾಗಿ ನೌಕರರ ಮತ್ತು ಇತರರ ಮಕ್ಕಳ ಶೈಕ್ಷಣಿಕ ಅಗತ್ಯವನ್ನು ಪೂರೈಸುತ್ತಿದ್ದು, ಪ್ರಸ್ತುತ ವಿದ್ಯಾಲಯವು 1 ನೇ ತರಗತಿಯಿಂದ 7ನೇ ತರಗತಿಯವರೆಗೆ ಎರಡು ವಿಭಾಗಗಳು ಹಾಗೂ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಒಂದು ವಿಭಾಗವನ್ನು ಹೊಂದಿದ್ದು, ಒಟ್ಟು 788 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯವನ್ನು ಹೊಂದಲಾಗಿದೆ ಎಂದು ಹೇಳಿದರು.
ತಾಂತ್ರಿಕ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ನೌಕರರ ಮಕ್ಕಳಿಗೆ ಮಾಸಿಕ 600 ರೂಗಳಂತ ಹೆಣ್ಣು ಮಕ್ಕಳಿಗೆ ಹಾಗೂ 400ರೂಗಳಂತೆ ಗಂಡು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಎಲ್ಲಾ ಸ್ಥಳೀಯ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಪ್ರಮಾಣಪತ್ರದೊಂದಿಗೆ ಬೆಳ್ಳಿ ಪದಕವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಹಟ್ಟಿ ಚಿನ್ನದ ಗಣಿ ಕಂಪನಿಯು ವೃತ್ತಿಪರ ತರಬೇತಿ ಕೇಂದ್ರ ಹೊಂದಿರುವುದರ ಜೊತೆಗೆ ಪ್ರಥಮ ಚಿಕಿತ್ಸಾ ತರಬೇತಿ ಕೋರ್ಸ್ ನಡೆಸಲು ಮತ್ತು ಪ್ರಮಾಣೀಕರಿಸಲು ಡಿಜಿಎಂಎಸ್ ಇಲಾಖೆಯಿಂದ ಪರವಾನಿಗೆ ಪಡೆದಿರುತ್ತದೆ. ಅಲ್ಲದೆ ಹಟ್ಟಿ ಚಿನ್ನದ ಗಣಿ ಕ್ರೀಡಾ ಸಂಸ್ಥೆಯ ವತಿಯಿಂದ ಕಂಪನಿಯು ತನ್ನ ಉದ್ಯೋಗಿಗಳು ಮತ್ತು ಅವರ ಅವಲಂಬಿತರಿಗೆ ಕ್ರೀಡೆ, ಫಿಟೈಸ್ ಮತ್ತು ಮನರಂಜನಾ ಚಟುವಟಿಕೆಗಳ ಅಗತ್ಯತೆಗಳನ್ನು ಪೂರೈಸುತ್ತಿದೆ. ಅಲ್ಲದೇ ಜಿಮ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಲೈಬ್ರರಿ ಮತ್ತು ಕೇರಮ್ ಒಳಾಂಗಣ, ಹೊರಾಂಗಣ ಕ್ರೀಡಾ ಸೌಲಭ್ಯಗಳಲ್ಲಿ ಕ್ರಿಕೆಟ್, ಫುಟ್ಬಾಲ್ ಮೈದಾನ, ವಾಲಿ ಬಾಲ್ ಮೈದಾನ ಮತ್ತು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳ ಸೌಲಭ್ಯಗಳನ್ನು ಹೊಂದಿಲಾಗಿದೆ.
ಕಲ್ಯಾಣ ಮಂಟಪ ಹಾಗೂ ಎಲ್ಲಾ ಕಾಲೋನಿಗಳಲ್ಲಿ ಸಮುದಾಯ ಭವನಗಳನ್ನು ಹೊಂದಿದ್ದು, ನೌಕರರು ಮತ್ತು ಅವರ ಸಂಬAಧಿಕರಿಗೆ ಕಾರ್ಯಕ್ರಮಗಳಿಗಾಗಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ಉಪಹಾರಗೃಹದಿಂದ ಎಲ್ಲಾ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಗರಿಷ್ಠ ರಿಯಾಯಿತಿ ದರದಲ್ಲಿ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲಿಂಗಸೂಗೂರು ಕ್ಷೇತ್ರದ ಶಾಸಕ ಡಿ.ಎಸ್.ಹುಲಿಗೇರಿ, ಮಾನವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರ, ಹಟ್ಟಿ ಚಿನ್ನದ ಗಣಿ ಕಂಪನಿ ನಿಗಮ ನಿಯಮಿತದ ಅಧ್ಯಕ್ಷ ಮಾನಪ್ಪ ವಜ್ಜಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಲಿಂಗಸೂಗೂರು ಸಹಾಯಕ ಆಯುಕ್ತ ರಾಹುಲ್ ಸಂಕನೂರು, ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.
Comments
Post a Comment