ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಕರವೇ ತೀರ್ವ ಖಂಡನೆ .

 ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಕರವೇ ತೀರ್ವವಾಗಿ ಖಂಡನೆ    

ರಾಯಚೂರು,ಏ.19- ಜಿಲ್ಲಾಧಿಕಾರಿಯಾದ ಡಾ. ಅವಿನಾಶ ಮೆನನ್ ರವರ ವರ್ಗಾವಣೆಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಘಟಕ ತೀರ್ವವಾಗಿ ಖಂಡಿಸುತ್ತದೆ. ಕೇವಲ ಆರು ತಿಂಗಳಿಗೆ  ವರ್ಗಾವಣೆ ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.  ತಮ್ಮ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳನ್ನ ವರ್ಗಾಯಿಸಲು ಜಿಲ್ಲೆಯ ಶಾಸಕರುಗಳ ಪಿತೂರಿ ಎಂದು ಜಿಲ್ಲೆಯ ಜನತೆ ಮಾತನಾಡುತ್ತಿದ್ದಾರೆ.  ಜಿಲ್ಲೆಯ ಸ್ಥಿತಿಗತಿಗಳನ್ನು  ಅರಿಯುವಷ್ಟರಲ್ಲೆ ವರ್ಗಾವಣೆ ಗೊಂಡರೆ,  ಜಿಲ್ಲೆಯಾದಂತ ಸಮಸ್ಯೆಗಳು ಶಾಶ್ವತವಾಗಿ ಉಳಿಯುತ್ತವೆ. ವರ್ಗಾವಣೆ ಆಡಳಿತಾತ್ಮಕ ಕ್ರಮವಾಗಿದ್ದರು,  ಕನಿಷ್ಠ  ಎರಡುವರೆ ಅಥವಾ ಮೂರು ವರ್ಷ ಸೇವೆ ಸಲ್ಲಿಸಲು ಅವಕಾಶ ನೀಡಿದರೆ ಜಿಲ್ಲೆಯ ಅಭಿವೃದ್ಧಿ ಆಗುತ್ತದೆ. ತಕ್ಷಣ ಜಿಲ್ಲಾಧಿಕಾರಿಗಳ ವರ್ಗಾವಣೆ ತಡೆ ಹಿಡಿದು ಜಿಲ್ಲೆಯಲ್ಲೇ ಮುಂದುವರೆಯಲು ಕರವೇ ಸಂಘಟನೆಯು ಸರಕಾರವನ್ನು             ಆಗ್ರಹಿಸುತ್ತದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ