ಜಿಲ್ಲಾಧಿಕಾರಿ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕದ್ವಯರು ಕಾರಣ- ರವಿ ಬೋಸರಾಜು.

 ಜಿಲ್ಲಾಧಿಕಾರಿ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕದ್ವಯರು ಕಾರಣ- ರವಿ ಬೋಸರಾಜು.                         ರಾಯಚೂರು,ಏ.19-ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕ ದ್ವಯರಾದ ಡಾ.ಶಿವರಾಜ ಪಾಟೀಲರು ಮತ್ತು ಕೆ.ಶಿವನಗೌಡ ನಾಯಕರು ಕಾರಣವೆಂದು ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಆರೋಪಿಸಿದರು.                                ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ  ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ  ಜಿಲ್ಲಾಧಿಕಾರಿಗಳನ್ನು ದಿಡೀರನೆ ವರ್ಗಾವಣೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರ್ಕಾರ ಬಂದಾಗಿನಿಂದಲು ನಾಲ್ಕೈದು ಜಿಲ್ಲಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ಬದಲಾಗಿದ್ದಾರೆ. ಜಿಲ್ಲಾ ಮಂತ್ರಿಗಳು ಜಿಲ್ಲೆಯ ಬಗ್ಗೆ ತಾತ್ಸಾರ ಮನೋಭಾವನೆ ತಳೆದಿದ್ದಾರೆ ಜಿಲ್ಲೆಗೆ ಭೇಟಿ ನೀಡುವುದು ವಿರಳವಾಗಿದೆ ಜಿಲ್ಲೆಯ ಬಿಜೆಪಿ ಶಾಸಕರು ಜಿಲ್ಲಾಧಿಕಾರಿಗಳು ತಮ್ಮ ಆಣತೆಯಂತೆ  ನಡೆಯುತ್ತಿಲ್ಲವೆಂದು ಹಾಗೂ ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಶೇ.40 ರಷ್ಟು ಕಮೀಶನ ಹಾವಳಿ ಜಿಲ್ಲೆಯಲ್ಲಿಯೂ ಇದ್ದು ಅದಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಲು ಮುಂದಾಗಿರುವುದು ವರ್ಗಾವಣೆಗೆ ಕಾರಣವಾಗಿರಬಹುದೆಂದರು. ಜಿಲ್ಲೆಯಲ್ಲಿ ಅಭಿವೃದ್ದಿ ಕುಂಟಿತವಾಗಿದೆ ಕಾಮಗಾರಿಯಲ್ಲಿ ಕಮೀಷನ್ ಪಡೆಯಲು ಮುಂದಾಗಿದ್ದಾರೆ ಶಾಸಕ ಡಾ.ಶಿವರಾಜ ಪಾಟೀಲ್ ಅಣ್ಣ ತಮ್ಮಂ ದಿರು ಗುತ್ತಿಗೆ ಪಡೆಯುತ್ತಾರೆಂದು ದೂರಿದ ಅವರು ರಾಜ್ಯದ 224 ಶಾಸಕರ ಪೈಕಿ ಡಾ.ಶಿವರಾಜ್ ಪಾಟೀಲ್ ಅತ್ಯಂತ ಭ್ರಷ್ಟ ಶಾಸಕರಾಗಿದ್ದಾರೆಂದರು. ಶಾಸಕರ ಒತ್ತಡದಿಂದ ಅಧಿಕಾರಿಗಳು ಕಾರ್ಯ ನಿರ್ವಹಿಸದ ಸ್ಥಿತಿಯಲ್ಲಿದ್ದಾರೆ ನಗರಸಭೆ ಪೌರಾಯುಕ್ತರು ಆರೋಗ್ಯ ಕಾರಣವೆಂದು ವಾಲಂಟರಿ ರಿಟೈಮೆಂಟ್ ಪಡೆಯುತ್ತಿದ್ದಾರೆಂದರು.ಇತ್ತೀಚೆಗೆ ತೆಲಂಗಣ ಮಂತ್ರಿ ಕೆಟಿಆರ್ ಶಾಸಕ ಡಾ.ಶಿವರಾಜ ಪಾಟೀಲರ ಭ್ರಷ್ಟಾಚಾರ ಬಗ್ಗೆ ನೀಡಿರುವ ಹೇಳಿಕೆಯ ತುಣಕು ಪ್ರದರ್ಶಿಸಿದರು.ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಡುತ್ತದೆ ಎಂದರು.ಈ ಸಂದರ್ಭದಲ್ಲಿ ಸಾಜಿದ ಸಮೀರ್, ನರಸಿಂಹಲು ಮಾಡಗಿರಿ, ರಮೇಶ,ಅರುಣ ಧೋತರಬಂಡಿ ಇದ್ದರು.             

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್