ಜಿ.ಪೂರ್ಣಿಮಾ ಗಾಣದಾಳರವರಿಗೆ ಶಾಸಕ ಡಾ. ಶಿವರಾಜ್ ಪಾಟೀಲ್ ರಿಂದ ಸನ್ಮಾನ
ರಾಯಚೂರು,ಏ.29- ಹಿರಿಯ ಸಾಹಿತಿಗಳಾದ ಡಾ. ಬಿ.ಲಿಂಗಣ್ಣ ಗಾಣದಾಳ ಇವರ ಸುಪುತ್ರಿ ಜಿ.ಪೂರ್ಣಿಮಾ ಗಾಣದಾಳ ಇವರು ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗದಲ್ಲಿ ನಡೆದ 40ನೇ ಘಟಿಕೋತ್ಸವದಲ್ಲಿ ಎಂ. ಎ. ಕನ್ನಡ ಸ್ನಾತನಕೋತ್ತರ ವಿಭಾಗದಲ್ಲಿ 12 ಚಿನ್ನದ ಪದಕವನ್ನು ಪಡೆದು ರಾಯಚೂರು ಜಿಲ್ಲೆಗೆ ಕೀರ್ತಿ ತಂದಿರುವ ಹಿನ್ನಲೆ ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಇವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ವೈ. ಗೋಪಾಲ್ ರೆಡ್ಡಿ ,ಮಾಜಿ ಸದಸ್ಯರಾದ ಎ.ಚಂದ್ರಶೇಖರ್ ,ನಗರಸಭೆ ಸದಸ್ಯರಾದ ನಾಗರಾಜ್ , ಎನ್ .ಶ್ರೀನಿವಾಸರೆಡ್ಡಿ , ಪೂಗಲ್ ಶ್ರೀನಿವಾಸ್ ರೆಡ್ಡಿ ,ಒಬಿಸಿ ನಗರಾಧ್ಯಕ್ಷರಾದ ಯು. ಆಂಜನೇಯ, ಪ್ರಧಾನ ಕಾರ್ಯದರ್ಶಿ ನವೀನ್ ರೆಡ್ಡಿ , ಜಿ.ಕೇಶವಮೂರ್ತಿ ಇನ್ನೂ ಅನೇಕ ಕಾರ್ಯಕರ್ತರು ಇದ್ದರು.
Comments
Post a Comment