ಖಾಜನಗೌಡರ ವಿವಾಸದಲ್ಲಿ ವಿಜಯದಾಸರ ಚಿತ್ರದ ಚಿತ್ರಿಕರಣಕ್ಕೆ ಚಾಲನೆ.
ರಾಯಚೂರು,ಏ.26-ದಾಸರ ತೊಟ್ಟಿಲು ಎಂದು ಕರೆಸಿಕೊಳ್ಳುವ ರಾಯಚೂರಲ್ಲಿ ಶ್ರೀವಿಜಯ ದಾಸರ ಚಿತ್ರದ ಚಿತ್ರೀಕರಣಕ್ಕೆ ಇಂದು ನಗರದ ಪುರಾತನವಾದ ಖಾಜನಗೌಡರ ವಿವಾಸದಲ್ಲಿ ಚಾಲನೆ ನೀಡಲಾಯಿತು. ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಡಾ. ಹರೀಶ ರಾಮಸ್ವಾಮಿರವರು ಚಾಲನೆ ನೀಡಿದರು . ಗತ ಇತಿಹಾಸದಲ್ಲಿ ದೊಡ್ಡಮನೆತನವಾದ ಖಾಜನಗೌಡರ ಮನೆ ಇಂದು ಭಾಗಶ ಜರ್ಜರಿತವಾಗಿದ್ದರು ಮನೆಯ ಮುಂಬಾಗಿಲು ಒಳಗಿನ ಕೋಣೆಗಳು ಕೊಂಚ ಮಟ್ಟಿ ಗೆ ಸುಸ್ಥಿತಿಯಲ್ಲಿದ್ದು ಇಂದ ಚಿತ್ರದ ವಿವಾಹ ಸನ್ನಿವೇಶದ ಚಿತ್ರೀಕರಣ ನಡೆದಿದ್ದು ಮನೆಗೆ ತಳಿರು ತೋರಣ ಕಟ್ಟಲಾಗಿತ್ತು ಮನೆ ಮುಂದೆ ಚಪ್ಪರ ಹಾಕಲಾಗಿತ್ತು ಮಹಿಳೆಯರು ಮತ್ತು ಪುರುಷರು ಸಾಂಪ್ರದಾಯಕ ಉಡುಗೆಯಲ್ಲಿ ಕಂಗೊಳಿಸಿದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಮಧುಸೂಧನ ಹವಾಲ್ದಾರ್, ಚಿತ್ರದ ನಿರ್ಮಾಪಕ, ವಿಜಯದಾಸರ ಪಾತ್ರಧಾರಿ ತ್ರಿವಿಕ್ರಮ ಜೋಷಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿರ್ದೇಶಕ ಜಗನ್ನಾಥ ಕುಲಕರ್ಣಿ ಸೇರಿದಂತೆ ಸಹ ಕಲಾವಿದರು, ತಂತ್ರಜ್ಞರು ಇದ್ದರು.
Comments
Post a Comment