ನಗರಸಭೆ ಸಾಮಾನ್ಯ ಮಹಾಸಭೆ: ಮಹಿಳಾ ಸದಸ್ಯೆಯಿಂದ ಮಿಂಚಿನ ಪ್ರತಿಭಟನೆ.

 ನಗರಸಭೆ ಸಾಮಾನ್ಯ ಮಹಾಸಭೆ: ಮಹಿಳಾ ಸದಸ್ಯೆಯಿಂದ ಮಿಂಚಿನ ಪ್ರತಿಭಟನೆ.                               ರಾಯಚೂರು,ಏ.30-ತಾವು ಪ್ರತಿನಿಧಿಸುವ ವಾರ್ಡಿನಲ್ಲಿ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು  ಎಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕಾಮಗಾರಿ ಪ್ರಾರಂಭವಾಗಿಲ್ಲ ಈ ಕೂಡಲೆ ರಸ್ತೆ ಕಾಮಗಾರಿ ಪ್ರಾರಂಭಿಸಬೇಕೆಂದು ನಗರಸಭೆ ಸದಸ್ಯೆಯೋರ್ವರು ಇಂದು ನಡೆದ  ನಗರಸಭೆ ಸಾಮಾನ್ಯ ಮಹಾಸಭೆಯಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದ್ದರಿಂದ ಸಭೆಯಲ್ಲಿ ಕೆಲ ಕಾಲ ಭಾರಿ ಕೋಲಾಹಲ ಉಂಟಾಯಿತು.  ಸಮಾನ್ಯ ಮಹಾಸಭೆ ಪ್ರಾರಂಭವಾಗುತ್ತಿದಂತೆ  ವಾರ್ಡ ನಂ.11 ಪ್ರತಿನಿಧಿಸುವ ನಗರಸಭೆ ಸದಸ್ಯರಾದ ರತ್ನ ಪ್ರಶಾಂತಿ ರವರು ತಮ್ಮ ಆಸನದಿಂದ ಎದ್ದು ಬಂದು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ,ಪೌರಾಯುಕ್ತರು ಕುಳಿತಿದ್ದ ವೇದಿಕೆ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ತಮ್ಮ ಬೇಡಿಕೆ ಈಡೇರಿಸದಿದ್ದರೆ ತಾವು ಈ ಸ್ಥಳದಿಂದ ಕದಲುವುದಿಲ್ಲ ನನ್ನನ್ನು ಚುನಾಯಿಸಿದ ಜನರು ದಿನ ನಿತ್ಯ ತಮ್ಮ ಮೇಲೆ ಹಿಡಿ ಶಾಪ ಹಾಕುತ್ತಿದ್ದು ನನ್ನ ಮನವಿಗೆ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಅಳಲು ವ್ಯಕ್ತಪಡಿಸಿದರು ಇದಕ್ಕೆ ಸ್ಪಂದಿಸಿದ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ್ಯರವರು ಪೌರಾಯುಕ್ತರಿಗೆ ಸೂಚಿಸಿ ಕಾಮಗಾರಿ ಟೆಂಡರ್ ಪ್ರಕ್ರೀಯೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು ಇದಕ್ಕೆ ಸಭೆಯಲ್ಲಿದ್ದ ಸರ್ವ ಸದಸ್ಯರು  ಧ್ವನಿಗೂಡಿಸಿ, ನಗರಸಭೆ ಸದಸ್ಯರು ಪ್ರತಿಭಟನೆ ಮೂಲಕ ಕೆಲಸ ಮಾಡಿಸಿಕೊಳ್ಳುವ ಹಂತಕ್ಕೆ ಅಧಿಕಾರಿಗಳು ನಿಷ್ಕ್ರೀಯರಾಗಬಾರದೆಂದರು ನಂತರ ಪ್ರತಿಭಟನೆ ಹಿಂಪಡೆದ ಸದಸ್ಯೆ ತಮ್ಮ ಸ್ಥಾನಕ್ಕೆ ಹಿಂದಿರುಗಿದರು.                      ನಂತರ ನಡೆದ ಸಭೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಮೋಟಾರ್ ಪಂಪ್ ಖರೀದಿ ಅಂದಾಜು ವೆಚ್ಚ ತಯಾರಿಸಲು ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಭಾರಿ ವಾಕ್ಸಮರ ಏರ್ಪಟ್ಟಿತು, ನಗರಸಭೆ ಮಾಜಿ ಅಧ್ಯಕ್ಷ ಈ.ವಿನಯಕುಮಾರ ಮಾತನಾಡಿ ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಬಾರದು ಮೋಟಾರ್  ಪಂಪ್ ಖರೀದಿ ಕುರಿತು ಮತ್ತೋಮ್ಮೆ ತುರ್ತು ಸಭೆ ನಡೆಸಿ ಅನುಮೋದನೆ ಪಡೆಯಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಲು ಕೋರಿದರು. ಹಿರಿಯ ಸದಸ್ಯ ಜಯಣ್ಣ ಮಾತನಾಡಿ ಮೋಟಾರ್ ಪಂಪ್ ಖರೀದಿ ಬಗ್ಗೆ ನಮ್ಮ ಆಕ್ಷೇಪವಿಲ್ಲ ಬದಲಾಗಿ ಈ ಹಿಂದೆ ಖರೀದಿಸಿದ ಪಂಪ್ ವಾರಂಟಿ ಅವಧಿಯಲ್ಲಿ ಕೆಟ್ಟದ್ದರಿಂದ ಅದರ ದುರಸ್ಥಿಯಾಗಬೇಕು ಸಾರ್ವಜನಿಕರ ತೆರಿಗೆ ಹಣ ಲೂಟಿಯಾದರೆ ಹೇಗೆಂದರು. ಎನ್.ಶ್ರೀನಿವಾಸರೆಡ್ಡಿ ಮಾತನಾಡಿ ಜನರ ತೆರಿಗೆ ಹಣವನ್ನು ಲೂಟಿಯಾಗಲು ಬಿಡುವುದಿಲ್ಲವೆಂದರು.ಇದಕ್ಕೆ ಪ್ರತಿಕ್ರಯಿಸಿದ ಸದಸ್ಯರಾದ ಈ.ಶಶಿರಾಜ ಮತ್ತು ಎನ್.ಕೆ.ನಾಗರಾಜ ಇಲ್ಲಿ ಯಾವುದೆ ಲೂಟಿ ನಡೆದಿಲ್ಲ ಜನರ ತೆರಿಗೆ ಹಣ ಸಮರ್ಪವಾಗಿ ಅಭಿವೃಧ್ಧಿಗೆ ಮೀಸಲಿಡಲು ನಮ್ಮ ಆದ್ಯತೆಯಾಗಿದೆ ಎಂದರು. ಸದಸ್ಯ ಸಣ್ಣ ನರಸರೆಡ್ಡಿ ಮಾತನಾಡಿ ಲೇಔಟಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯ ಪರಿಶೀಲಿಸಿ ನಗರಸಭೆ ಒಪ್ಪಿಗೆ ನೀಡಬೇಕೆಂದರು.                                   ಸದಸ್ಯರಾದ ಸಮೀನಾ ಮುಕ್ರಂ, ಸಾಜಿದ ಸಮೀರ್, ಖುರ್ಷಿದ ಬಾನು ಮಾತನಾಡಿ ರಂಜಾನ್ ಹಬ್ಬದ ಹಿನ್ನಲೆ ತಮ್ಮ ವಾರ್ಡಿನಲ್ಲಿ ಮೂಲಭೂತ ಸೌಲಭ್ಯಗಳಾದ ಬೀದಿ ದೀಪ, ಕಸ ವಿಲೆವಾರಿಗೆ ಆದ್ಯತೆ ನೀಡಬೇಕೆಂದರು ಎಲ್ಲ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.                      ಸಭೆಯಲ್ಲಿ ದರೂರು ಬಸವರಾಜ, ಶರಬಸ್ಸಪ್ಪ ಬಲ್ಲಟಗಿ ಇತರರು ಮಾತನಾಡಿದರು.                                   ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಪುತ್ಥಳಿ ಸ್ಥಾಪನೆ, ರಸ್ತೆಗಳಿಗೆ ಮಹನೀಯರ ,ಹಿರಿಯರ ಹೆಸರು ನಾಮಕರಣ, ಕಾಮಗಾರಿಗಳ ಬಿಲ್ ಪಾವತಿ, ವಾರ್ತಾ ಇಲಾಖೆ ಮತ್ತು ವಿವಿಧ ಪತ್ರಿಕೆಗಳ ಜಾಹಿರಾತು ಮೊತ್ತ ಬಾಕಿ ಪಾವತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.                            ಈ.ವಿನಯ್ ಕುಮಾರ್ ಮತ್ತು ಜಿಂದಪ್ಪ ನಡುವೆ ಪರಸ್ಪರ ವಾಗ್ಯುದ್ಧ : ಈ.ವಿನಯ್ ಕುಮಾರ್ ಮತ್ತು ಜಿಂದಪ್ಪ ನಡುವೆ ಮೇಜು ಕುಟ್ಟಿ ಪರಸ್ಪರ ವಾಗ್ಯುದ್ಧ ನಡೆಯಿತು. ತಾವು ಮಾತನಾಡುವ ವೇಳೆ ಜಿಂದಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಸಭೆಯಲ್ಲಿ ಈ.ವಿನಯಕುಮಾರ  ಹೇಳಿದ್ದರಿಂದ ಜಿಂದಪ್ಪ ಕೆರಳಿದರು ಪರಸ್ಪರ ಕಾವೇರಿದ ವಾಕ್ಸಮರ ನಡೆದು ಸಭೆಯಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.                  ಪೌರಾಯುಕ್ತರಿಗೆ ಬೀಳ್ಕೋಡುಗೆ: ಸ್ವಯಂ ಸೇವಾ ನಿವೃತ್ತಿ    ಹೊಂದಿದ ಪೌರಾಯುಕ್ತರಾದ ಕೆ.ಮುನಿಸ್ವಾಮಿಗೆ ಹೃತ್ಪೂರ್ವಕವಾಗಿ ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೋಕಡಲಾಯಿತು. ಪೌರಾಯುಕ್ತ ಮುನಿಸ್ವಾಮಿ ಮಾತನಾಡಿ ಕೆಳ ಸ್ಥರದಿಂದ ಸೇವೆಗೆ ಸೇರ್ಪಡೆಯಾಗಿ ಪೌರಾಯುಕ್ತ ಸ್ಥಾನದವರೆಗೂ ಸೇವೆಯ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆಂದರು.          ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಲಲಿತಾ  ಕಡಗೋಲ ಆಂಜಿನೇಯ್ಯ, ಉಪಾಧ್ಯಕ್ಷೆ ನರಸಮ್ಮ  ನರಸಿಂಹಲು ಮಾಡಗಿರಿ,ಪೌರಾಯುಕ್ತ ಕೆ.ಮುನಿಸ್ವಾಮಿ ಇದ್ದರು .ಸಭೆಯಲ್ಲಿ ವಿವಿಧ ವಾರ್ಡಗಳ ನಗರಸಭೆ ಸದಸ್ಯರು, ನಗರಸಭೆ ಸಿಬ್ಬಂದಿ ಗಳಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ