ಜಿಲ್ಲೆಯ 179 ಗ್ರಾ.ಪಂ.ಗಳಲ್ಲಿ ``ದುಡಿಯೋಣ ಬಾ ಅಭಿಯಾನ’’

 ಜಿಲ್ಲೆಯ 179 ಗ್ರಾ.ಪಂ.ಗಳಲ್ಲಿ ``ದುಡಿಯೋಣ ಬಾ ಅಭಿಯಾನ’’‌:


ನರೇಗಾ ಯೋಜನೆಯಡಿ ಜಿಲ್ಲೆಗೆ 105 ಲಕ್ಷ ಮಾನವ ದಿನಗಳ ಗುರಿ

ವಿಶೇಷ ವರದಿ:

ರಾಯಚೂರು ಮೇ.26,(ಕ.ವಾ):-ರಾಜ್ಯದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಭಾರತ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಪಾತ್ರವಾಗಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ. 


 ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ಯಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ, ಅಂತವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು 2005ರ ಸೆಪ್ಟೆಂಬರ್ 5ರಂದು ಜಾರಿಗೆ ತರಲಾಯಿತು. ಆರಂಭದಲ್ಲಿ ಈ ಯೋಜನೆಗೆ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಓಖಇಉಂ) ಎಂದು ಹೆಸರಿಸಲಾಯಿತು. ಆದರೆ 2009ರ ಅಕ್ಟೋಬರ್ 2ರಂದು ಈ ಯೋಜನೆಯ ಹೆಸರನ್ನು ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಒಓಖಇಉಂ) ಎಂದು ಬದಲಾಯಿಸಲಾಯಿತು.


 ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತೀವ್ರತೆ ಕಡಿಮೆಯಾಗಿ ಸಾಮಾನ್ಯ ಜನಜೀವನ ಸಹಜ ಸ್ಥಿತಿಗೆ ಬಂದಿದ್ದು, ಜಿಲ್ಲೆಯ 179 ಗ್ರಾ.ಪಂ.ಗಳಲ್ಲಿ `ದುಡಿಯೋಣ ಬಾ’ ಅಭಿಯಾನದಡಿ ಹಲವಾರು ಜಲಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಾಮಕಾರಿಗಳು ಪ್ರಗತಿಯಲ್ಲಿವೆ. 


 ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರ ಜಮೀನುಗಳಲ್ಲಿ ಕೈಗೆತ್ತಿಕೊಂಡಿರುವ ಅಂತರ್ಜಲವೃದ್ಧಿಗೆ ಈ ವರ್ಷ ಕ್ರಿಯಾ ಯೋಜನೆ ಪ್ರಕಾರ ಜಿಲ್ಲೆಯಲ್ಲಿ 3,745 ಕೃಷಿಹೊಂಡ, 14,454 ಬದು ನಿರ್ಮಾಣ, 431 ತೆರೆದ ಬಾವಿ, 20184 ಸೋಕ್ ಪಿಟ್, 168 ಬೋರ್ವೆಲ್ ರಿಚಾರ್ಜ್ ಕಾಮಗಾರಿಗಳಿಗೆ ಅನುಮೊದನೆ ನೀಡಲಾಗಿದೆ. ಇದರ ಜೊತೆಗೆ ತೋಟಗಾರಿಕೆ ವ್ಯಾಪ್ತಿಯಲ್ಲಿ 40 ರೇಷ್ಮೆ ಶೆಡ್, 25 ದನದ ಶೆಡ್, 6413 ಕುರಿ ಶೆಡ್, 295 ಕೋಳಿ ಶೇಡ್, 10 ಹಂದಿ ಶೇಡ್, 12 ಈರುಳ್ಳಿ ಶೆಡ್ ಹಾಗೂ 6 ಇತರೆ ಕಾಮಗಾರಿಗಳು ಸೇರಿದಂತೆ ಒಟ್ಟು 45,783 ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

   

ಹಸಿರೀಕರಣಕ್ಕೆ ಒತ್ತು:

  ರೈತ ಸ್ನೇಹಿ ಕಾರ್ಯಕ್ರಮಗಳ ಜತೆ ಹಸಿರೀಕರಣಕ್ಕೆ ಸದಾ ಮುಂದಾಗಿರುವ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿಗಳಲ್ಲಿ 113 ಕಿ.ಮೀ ಉದ್ದದ ರಸ್ತೆಗಳುದ್ದಕ್ಕೂ ನೆಡುತೋಪು ನಿರ್ಮಾಣ, 19 ರೈತರ ಜಮೀನುಗಳಲ್ಲಿ ಅರಣ್ಯೀಕರಣ, 93 ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು, 29 ಗ್ರಾಮೀಣ ಉದ್ಯಾನವನ, ಅರಣ್ಯ ಪ್ರದೇಶಗಳಲ್ಲಿ 43 ಕಂದಕ ನಿರ್ಮಾಣ, 18 ಇತರೆ ಕಾಮಗಾರಿ ಸೇರಿ ಒಟ್ಟು 5,067 ಕಾಮಗಾರಿಗಳನ್ನು ಜಾರಿ ಮಾಡಲಾಗುತ್ತಿದೆ.


ಗ್ರಾ.ಪಂ.ಗಳಿಗೆ ಮೂಲಸೌಕರ್ಯ: 

  ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೂ ನರೇಗಾದಡಿ ಆದ್ಯತೆ ನೀಡಲಾಗುತ್ತಿದ್ದು, ಜಿಲ್ಲೆಯ 179 ಗ್ರಾ.ಪಂ.ಗಳಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ 14, ಗೋದಾಮು ನಿರ್ಮಾಣ 39, ಹೊಸ ಗ್ರಾಪಂ ಕಟ್ಟಡ 47, ಮಳೆ ನೀರು ಕೋಯ್ಲು 101, ಅಂಗನವಾಡಿ ಕೇಂದ್ರ 206, ಸಂಜೀವಿನ ಶೆಡ್ಡು 14, ಹಳ್ಳಿ ಸಂತೆ ಕಟ್ಟೆ 9, ರಸ್ತೆ ಕಾಮಗಾರಿ 1008, ಚರಂಡಿ ಕಾಮಗಾರಿ 443, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ 30 ಸೇರಿದಂತೆ ಒಟ್ಟು 1,911 ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 


ಶೈಕ್ಷಣಿಕ ಮೂಲಸೌಕರ್ಯ:

  ನರೇಗಾದಡಿ ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದ್ದು, ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. 365 ಶಾಲಾ ಕಂಪೌAಡ್ ನಿರ್ಮಾಣ, 27 ಬಾಸ್ಕೇಟ್ ಬಾಲ್ ಕೊರ್ಟ್, 314 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, 592 ಅಡುಗೆ ಕೋಣೆ, 161 ಭೋಜನಾಲಯ, ಪೌಷ್ಠಿಕ ತೋಟ 396 ಶಾಲೆಗಳಲ್ಲಿ ಮಕ್ಕಳಿಗೆ ಆಟೋಟಕ್ಕೆ ಅನುಕೂಲವಾಗುವಂತೆ 245 ಆಟದ ಮೈದಾನ ನಿರ್ಮಾಣ ಸೇರಿ ಒಟ್ಟು 2,100 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.


105 ಲಕ್ಷ ಮಾನವ ದಿನಗಳ ಗುರಿ: ಪ್ರಸ್ತುತ ರಾಜ್ಯದಲ್ಲಿ ರಾಯಚೂರು 5ನೇ ಸ್ಥಾನ: 

  ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ರಾಯಚೂರು ಜಿಲ್ಲೆಗೆ 105 ಲಕ್ಷ ಮಾನವ ದಿನಗಳ ಗುರಿ ಹೊಂದಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 13,41,473 ಮಾನವ ದಿನಗಳ ಸೃಜನೆಯ ಗುರಿ ತಲಿಪಿದೆ.  ಈಗಾಗಲೇ ದೇವದುರ್ಗ 1,96,864, ಲಿಂಗಸೂಗೂರು 1,42,708, ಮಾನವಿ 2,93,976, ಮಸ್ಕಿ 99,573, ರಾಯಚೂರು 2,22,634, ಸಿಂಧನೂರು 1,85,691 ಹಾಗೂ ಸಿರವಾರ 2,00,032 ಸೇರಿ ಒಟ್ಟು 13,41,473 ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲೇ ರಾಯಚೂರು ಜಿಲ್ಲೆ ಐದನೇ ಸ್ಥಾನದಲ್ಲಿದೆ.


  "ನರೇಗಾದಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸುವುದು. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳು ಮತ್ತು ವಿಶೇಷ ಚೇತನರು ಸಕ್ರಿಯವಾಗಿ ಭಾಗಹಿಸುವಂತೆ ಮಾಡುವುದು ಹಾಗೂ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದೇ ನರೇಗಾದ ಮುಖ್ಯ ಉದ್ದೇಶವಾಗಿದೆ."

-ನೂರ ಜಹಾರ್ ಖಾನಂ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಯಚೂರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್