ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಯಧ್ವಜ ನ್ಯೂಸ್ ರಾಯಚೂರು, ಡಿ.10- ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಅವರ ಸರಕಾರದಲ್ಲಿ ಚೀಫ್ ವಿಪ್ ಆಗಿ ಕೆಲಸ ನಿರ್ವಹಿಸಿ ನಂತರ ತೋಟಗಾರಿಕೆ ಇಲಾಖೆಯ ಸಚಿವರಾಗಿ ಕೆಲಸ ಮಾಡುವ ಭಾಗ್ಯವನ್ನು ಕಲ್ಪಿಸಿದ್ದರು. ನಂತರ ಆರ್ ಟಿ ಟಿ ಎಸ್ 7 ಮತ್ತು 8 ವಿದ್ಯುತ್ ಘಟಕಗಳು ಅವರ ಕಾಲದಲ್ಲಿಯೇ ಕೆಲಸ ಪ್ರಾರಂಭಿಸಿದ್ದು ಅದರ ಉದ್ಘಾಟನೆಗೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಆಗಮಿಸಿದ್ದರು. ಅವರೊಬ್ಬ ಸಜ್ಜನ್ ರಾಜಕಾರಣಿಯಾಗಿದ್ದರು. ರಾಜಕೀಯದಲ್ಲಿ ಗಾಂಭೀರ್ಯತೆಯುಳ್ಳವರಾಗಿದ್ದು ಅವರು ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ರಾಜ್ ಕುಮಾರ ಅಪಹರಣವನ್ನು ನಿಬಾಯಿಸಿದ ರೀತಿ ಅವರ ರಾಜಕೀಯ ಜಾಣ್ಮೆಗೆ ಉದಾಹರಣೆಯಾಗಿದೆ. ಅವರೊಬ್ಬ ಅಪರೂಪ ಸಜ್ಜನ್ ರಾಜಕಾರಣಿಯಾಗಿದ್ದರು ಎಂದು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.
Comments
Post a Comment