25 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ
ರಾಯಚೂರು ನಗರ: 25ರಂದು ವಿದ್ಯುತ್ ವ್ಯತ್ಯಯ
ರಾಯಚೂರು ಮೇ.23,:- ನಗರದ ಜವಾಹರನಗರ 33ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ಜವಾಹರ ನಗರ ವಿದ್ಯುತ್ ಮಾರ್ಗದ ಪರಿವರ್ತಕ ಬದಲಾವಣೆಯ ದುರಸ್ಥಿ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ 2022ರ ಮೇ.25ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಜವಾಹರನಗರ, ಹನುಮಾನ ಟಾಕೀಸ್, ಎನ್‌ಜಿಓ ಕಾಲೋನಿ, ವಾಸವಿ ನಗರ ಚಾಂನಿಕ್ ಪುರಿ ಲೇಔಟ್, ಬೋಳಂದೊಡ್ಡಿ ರೋಡ್, ವಿದ್ಯಾನಗರ, ಎಲ್‌ವಿಡಿ ಕಾಲೇಜ್ ಏರಿಯಾ, ತಿಮ್ಮಾಪೂರ ಪೇಟೆ, ಕೃಷ್ಣದೇವರಾಯ ಕಾಲೋನಿ, ಡೇಂಟಲ್ ಕಾಲೇಜ್, ಪಾಲಿಟೆಕ್ನಿಕ್ ಕಾಲೇಜ್ ಏರಿಯಾ, ಅಮರಖೇಡ್ ಲೇಔಟ್, ಮಾಣಿಕ್ ಲೇಔಟ್ ಮಾಣಿಕ್ ನಗರ ಹಾಗೂ ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ರಾಯಚೂರು ನಗರ ಜೆಸ್ಕಾಂ ಕಾ ಮತ್ತು ಪಾ ಉಪ ವಿಭಾಗ 1 ಮತ್ತು 2 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment