ಏಳನೆಯ ದಿನಕ್ಕೆ ಏಮ್ಸ್ ಹೋರಾಟ: ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಬೆಂಬಲ
ರಾಯಚೂರು,ಮೇ.19- ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಏಳನೆಯ ದಿನಕ್ಕೆ ಮುಂದುವರೆದಿದೆ. ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಇಂದು ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎನ್. ಮಹಾವೀರ್ ಅವರ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಸದಸ್ಯರು ಹೋರಾಟಕ್ಕೆ ಬೆಂಬಲಿಸಿ ಸತ್ಯಾಗ್ರಹ ದಲ್ಲಿ ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ತರಕಾರಿ ಮಾರಾಟಗಾರರ ಸಂಘದ ಪ್ರಭು ನಾಯಕ್ ,ಖಾಜಪ್ಪ ,ಬಸವರಾಜ್ , ಚೋಟು ,ಉದಯ್, ಈರಮ್ಮ, ಜಮಲಮ್ಮ, ತಿಪ್ಪಮ್ಮ, ಉದಯ್ ಸೇರಿದಂತೆ ಏಮ್ಸ್ ಹೋರಾಟ ಸಮಿತಿಯಿಂದ ಡಾ . ಬಸವರಾಜ ಕಳಸ, ಎಸ್ ಮಾರೆಪ್ಪ ವಕೀಲರು, ವೆಂಕಟೇಶ ಆಚಾರ್ಯ, ಪ್ರಸಾದ್ ಭಂಡಾರಿ, ಮಿಮಿಕ್ರಿ ಬಸವರಾಜ್ ,ಸುಲೋಚನಾ ,ಕಾಮ್ ರಾಜ್ ಪಾಟೀಲ್ ,ಕಿಶೋರ್ ತಿವಾರಿ, ಜೆ ಬಿ ರಾಜು ,ಅಡವಿ ರಾವ್ ಮುಂತಾದವರು ಭಾಗವಹಿಸಿದ್ದರು.
Comments
Post a Comment