ಏಮ್ಸ್ ಮಂಜೂರಾತಿಗೆ ಬಾಬುರಾವ್ ಒತ್ತಾಯ
ರಾಯಚೂರು,ಮೇ.25- ಜಿಲ್ಲೆಯ ಜನರ ಬೇಡಿಕೆಯಂತೆ ರಾಯಚೂರಗೆ ಏಮ್ಸ್ ಮಂಜೂರಾತಿ ಮಾಡಬೇಕು. ಜನರ ಭಾವನೆಗೆ ಬೆಲೆ ಕೊಡಬೇಕು ಎಂದು ರೇಲ್ವೇ ಬೋರ್ಡ್ ಸದಸ್ಯ ಬಾಬು ರಾವ್ ಸಂಸದ ಅಮರೇಶ್ವರ ನಾಯಕ ಮೂಲಕ ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದಾರೆ.ಏಕೆಂದರೆ ರಾಯಚೂರ. ತೀರಾ ಹಿಂದಳಿದ ಜಿಲ್ಲೆಯಾಗಿದೆ.ಇದರ ಅಭಿವೃದ್ದಿಗೆಂದು ಈ ಮೊದಲು ಹೈ.ಕ..ಅಭಿವೃದ್ದಿ ಮಂಡಳಿ ರಚಿಸಲಾಗಿತ್ತು.ನಂತರ ಸಂವಿಧಾನದ 371(j) ಸೌಲಭ್ಯ ನೀಡಿತ್ತು.ಅದಕ್ಕೂ ಮೀರಿ ನೀತಿ ಆಯೋಗವು ಮಹತ್ವಾಕಾಂಕ್ಷಿ ಜಿಲ್ಲೆಯಾಗಿ ಅಭಿವೃದ್ದಿಗೆ ತೆಗೆದುಕೊಂಡಿದೆ.ಅದಕ್ಕೆ ಅಭಿವೃದ್ದಿಗೆ ಪೂರಕವಾಗಿ ಏಮ್ಸ್ ಕೊಡಲೇಬೇಕು.ಈ ಮೊದಲು ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಘೋಷಿಸಿ,ಬೇರೆ ಜಿಲ್ಲೆಗೆ ನೀಡಲಾಗಿದೆ. ಈ ಭಾಗದ ಜನ ಬೇಸರಗೊಂಡಿದ್ದಾರೆ.ಏಮ್ಸ್ ಕೊಡಲೇಬೇಕೆಂಬ ಬಲವಾದ ಬೇಡಿಕೆ ಇಡಲಾಗಿದೆ.ಇದು ಕಡೆಗಣಿಸುವ ಪ್ರಶ್ನೆಯೇ ಏಳಬಾರದು.ಇಲ್ಲಿ ಭೂಮಿಯ ಲಭ್ಯತೆ ಇದೆ.ನೀರು ಸರಬರಾಜುಗೆ ಅಕ್ಕಪಕ್ಕ ಎರಡು ನದಿಗಳು ಹರಿಯುತ್ತಿವೆ.ವಿದ್ಯುತ ಪೂರೈಕೆಗೆ ಆರ್ಟಿಪಿಎಸ್,ವೈಟಿಪಿಎಸ್ ವಿದ್ಯುತ ಸ್ಥಾವರಗಳಿವೆ. ಉನ್ನತ ಶೈಕ್ಷಣಿಕ ಬೆಳವಣಿಗೆಗೆ ಏಮ್ಸ್ ಸಹಕಾರಿಯಾಗುತ್ತದೆ.ಪ್ರತ್ಯಕ್ಷ,ಪರೋಕ್ಷ ಉದ್ಯೋಗಗಳ ಸೃಷ್ಠಿಯಾಗುತ್ತವೆ.ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆ ಗುರುತಿಸಲ್ಪಡುತ್ತದೆ.ಇದಕ್ಕಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಲಾಗಿದೆ .ರಾಜ್ಯದ ಮುಖ್ಯಮಂತ್ರಿ ಸಹ ಆರೋಗ್ಯ ಇಲಾಖೆಗೆ ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಮಂತ್ರಿ ಶಂಕರ ಮುನೆನಕೊಪ್ಪ ಅವರು ಸಹ ಮನವಿ ಸ್ವೀಕರಿಸಿ,ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಇದೆಲ್ಲದರ ಜೊತೆಗೆ ರಾಯಚೂರ ತೀರಾ ಹಿಂದುಳಿದಿದೆ ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಮುಖ್ಯಸ್ಥ ನಂಜುಂಡಪ್ಪ ಉಲ್ಲೇಖಿಸಿದ್ದಾರೆ.ಈ ಎಲ್ಲ ಅಂಶಗಳು ಪರಿಗಣಿಸಿ,ಏಮ್ಸ್ ಮಂಜೂರಾತಿಗೆ ಕೋರುತ್ತೇನೆ.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗಂಗಾಧರ ನಾಯಕ ಇದ್ದರು.
Comments
Post a Comment