ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧರನ್ನು ಇಂದಿನ ಯುವ ಪೀಳಿಗೆ ಸ್ಮರಿಸಬೇಕು: ರಾಜಾ ಅಮರೇಶ್ವರ ನಾಯಕ

 ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧರನ್ನು ಇಂದಿನ ಯುವ ಪೀಳಿಗೆ ಸ್ಮರಿಸಬೇಕು: ರಾಜಾ ಅಮರೇಶ್ವರ ನಾಯಕ


ರಾಯಚೂರು ಮೇ.28- ಭಾರತ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ತ್ಯಾಗ ಬಲಿದಾನ ಮಾಡಿದ ವೀರ ಯೋಧರ ಬಗ್ಗೆ ಇಂದಿನ ಪೀಳಿಗೆಯ ಯುವಕರಿಗೆ ಹಾಗೂ ಮಕ್ಕಳಿಗೆ ತಿಳಿಯಪಡಿಸಬೇಕು ಆಗ ಮಾತ್ರ ಭಾರತವನ್ನು ಭವ್ಯ ಭಾರತವನ್ನಾಗಿ ಕಾಣಲು ಸಾಧ್ಯ ಎಂದು ಸಂಸದ ರಾಜ ಅಮರೇಶ ನಾಯಕ ಅವರು ಹೇಳಿದರು.


ಅವರಿಂದು ನಗರದ ಶ್ರೀರಾಮಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತಶ್ರಾದಲ್ಲಿ 75ನೇ ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ ಭಾರತಬಾಂಬೆಯ ಭಾವಚಿತ್ರಕ್ಕೆ ಪುಷ್ಪರ್ಚಾನೆ  ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಭಾರತ ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿ ತಮ್ಮ ಕುಟುಂಬಗಳನ್ನು ಕಳೆದುಕೊಂಡು ಹುತಾತ್ಮ ವೀರಯೋಧರ ರಕ್ತ ಬಲಿದಾನ ದ ತ್ಯಾಗದಿಂದ ನಾವು ಇಂದು ಭಾರತ ದೇಶದಲ್ಲಿ ಸ್ವಾತಂತ್ರ ಪಡೆದು ಸಾಮರಸ್ಯ ಜೀವನವನ್ನು ಸಾಗಿಸಲು ಸಾಧ್ಯವಾಗಿದೆ. ಯಾರು ಇತಿಹಾಸ ಬಗ್ಗೆ ಅರಿತುಕೊಳ್ಳುತ್ತಾರೆ ಅಂತವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.


ಭಾರತದ 75ನೇ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರಯೋಧರ ಬಗ್ಗೆ ಈಗಿನ ಯುವಕರಿಗೆ ಹೆಚ್ಚಿನ ರೀತಿಯಲ್ಲಿ ತಿಳಿಸಬೇಕು ಎಂದರು.


ಈ ವೇಳೆ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಮಾತನಾಡಿ

ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ  ತರಲು ತ್ಯಾಗ ಬಲಿದಾನ  ಹಾಗೂ ಬಂದು ಬಳಗ ಮತ್ತು  ಕುಟುಂಬಗಳನ್ನು ದೇಶಕ್ಕೆ ಅರ್ಪಣೆ ಮಾಡಿದ ವೀರಯೋಧರ ತ್ಯಾಗದಿಂದ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ  ಎಂದರು.


ಅ0ದಿನ ಕಷ್ಟ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು  ಪಣತೊಟ್ಟ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ  ಇಂದಿರಾಗಾAಧಿ ನರೇಂದ್ರ ಮೋದಿ  ಅವರ ಪರಿಶ್ರಮದಿಂದ ಇಡೀ ರಾಷ್ಟ್ರವೇ ಭಾರತ ದೇಶವನ್ನು ತಿರುಗಿ ನೋಡಿತ್ತಿದೆ ಎಂದು ಅವರು ಹೇಳಿದರು.


ಎಲ್ಲಾ ಸಮುದಾಯ ಜನಾಂಗದ ರಕ್ತ ಬಲಿದಾನದಿಂದ  ಈ ದೇಶಕ್ಕೆ ಸ್ವಾತಂತ್ರ  ದೊರೆತಿದ್ದು ಅವರಿಗೆ ಗೌರವ ಪೂರ್ವಕವಾಗಿ ಅಭಿನಂದನೆಗಳು ಸಲ್ಲಿಸಬೇಕು ಎಂದರು.


ಸ್ವಾತ0ತ್ರ ಹೋರಾಟದ ತ್ಯಾಗ ಬಲಿದಾನಗಳ ಪ್ರಮುಖ ಸ್ಥಳವಾದ ಶ್ರೀರಾಮಶಾಲಾ ಬಯಲುನಲ್ಲಿ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಶಿಲಾಫಲಕವನ್ನು ಅನಾವರಣ ಗೊಳಿಸಲಾಯಿತು. 


ಈ ವೇಳೆ ಕರ್ನಾಟಕದ ಕೆಚ್ಚೆದೆಯ ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನಗಳ ಬಗ್ಗೆ ಪರಿಚಯ ಮಾಡಲಾಯಿತು ಹಾಗೂ ಸ್ವಾತಂತ್ರ ಹೋರಾಟಗಾರದ ಡಿ. ಹಂಪಣ್ಣ ಹಾಗೂ ಸ್ವಾತಂತ್ರ ಹೋರಾಟದ ಪುಸ್ತಕ ಬರೆದ ರಾಮಣ್ಣ ಹವಳೆ ಲೇಖರಿಗೆ ಸನ್ಮಾನ ಮಾಡಲಾಯಿತು.


ನಂತರ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ್ ಅವರಿಂದ 75ನೇ ಭಾರತ ಸ್ವಾತಂತ್ರ ಅಮೃತ ಮಹೋತ್ಸವದ ಸಂಕಲ್ಪ ಭೋದಿಸಿದರು.


ಈ ಸಂದರ್ಭದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ನಗರಾಭಿವೃದ್ಧಿ ಪ್ರಾಧಿಕಾರದ ತಿಮ್ಮಪ್ಪ ನಾಡಗೌಡ, ನಗರಸಭೆಯ ಅಧ್ಯಕ್ಷೆ ಲಲಿತಾ ಕಡಗೋಳ ಆಂಜನೇಯ, ಉಪನ್ಯಾಸಕರು ಹಾಗೂ ಸಾಮಾಜಿಕ ಕಾರ್ಯಕರ್ತ ಕೇಶವ ಕೆ.ಎಸ್, ಸಾಹಿತಿ ವೀರ ಹನುಮಾನ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೂರ ಜಹಾರ್ ಖಾನಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ,  ರಾಯಚೂರು ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್, ನಗರಸಭೆಯ ಪೌರಾಯುಕ್ತ ಗುರುಲಿಂಗಪ್ಪ, ಸ್ವಾತಂತ್ರ‍್ಯ ಹೋರಾಟಗಾರ ಡಿ.ಪಂಪಣ್ಣ, ಸೇರಿದಂತೆ  ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.ಮುರಳಿಧರ ಕುಲಕರಣಿ ನಿರೂಪಿಸಿದರು

‌.



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ