ಹಿಂದುತ್ವದ ಶಬ್ದವನ್ನು ಜನಪ್ರಿಯಗೊಳಿಸಿದ್ದೆ ಸಾವರ್ಕರ್ -ನಾಗರಾಜ ಅಕ್ಕರಕಿ.

 ರಾಯಚೂರು,ಮೇ.29-ದೇವದುರ್ಗದ ವೀರ ಸಾವರ್ಕರ್ ಯೂತ್ ಅಸೋಸಿಯೇಷನ್ ವತಿಯಿಂದ,ಸಾವರ್ಕರ್ ಜನ್ಮ ದಿನಾಚರಣೆಯ ಜಯಂತಿಯನ್ನು ಆಚರಿಸಲಾಯಿತು..

 ಈ ಸಂಧರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಶ್ರೀ.ನಾಗರಾಜ ಅಕ್ಕರಕಿಯವರು ಮಾತನಾಡಿ, ಸಾವರ್ಕರ್ ರವರು ಲೇಖಕ,ಇತಿಹಾಸಕಾರ,ಕವಿ,ತತ್ವಶಾಸ್ತ್ರಜ್ಞ,ಮತ್ತು ಸಮಾಜಸೇವಕ,ಅವರನ್ನುಕೆಲವರು ಭಾರತದ ಸ್ವಾತಂತ್ರ್ಯಸಂಗ್ರಾಮದ ಅತಿದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ,ಇನ್ನು ಕೆಲವರು ಅವರನ್ನು ಕೋಮುವಾದಿಯಾಗಿಯೂ,ಭಾವಿಸುತ್ತಾರೆ,

ದಾಮೋದರ ಸವಾರ್ಕರ ರವರು ಹಿಂದುತ್ವದ ಉಗ್ರ ಪ್ರತಿಪಾದಕರಷ್ಟೇ ಅಲ್ಲ,ಆ ಶಬ್ದವವನ್ನು ಜನಪ್ರಿಯಗೊಳಿಸಿದ್ದೆ ಅವರು,ಎಂದು ಹೇಳಿದರು...

 ಚಿಂತನೆ,ಧರ್ಮ,ಭಾಷೆ,ಮತ್ತು ಸಂಸ್ಕೃತಿಯ,ಒಂದು ಸಾಮಾನ್ಯ ಎಳೆಯು ರಾಷ್ಟ್ರೀಯತೆಗೆ ಹೇಗೆ ಅಗತ್ಯ ಎಂಬುದನ್ನು ತಮ್ಮ ಕೃತಿಗಳ ಮೂಲಕ ಎತ್ತಿ ತೋರಿಸಿದ ಕೀರ್ತಿ ಸಾವರ್ಕರ್ ರವರಿಗೆ ಸಲ್ಲುತ್ತದೆ ಎಂದು ಹೇಳಿದರು..

  ಈ ಸಂಧರ್ಭದಲ್ಲಿ ಅಧ್ಯಕ್ಷ ವಾಸುದೇವ ನಾಯಕ,ಗಂಗನಗೌಡ ಗೌರಂಪೇಟ,ಚಂದ್ರು ಪಾಟೀಲ್,ಸುನೀಲ ಮಡಿವಾಳ,ಸಂಗಯ್ಯಸ್ವಾಮಿ,ಮಾಹಾಲಿಂಗಯ್ಯ ಸ್ವಾಮಿ,ವೀರೇಶ ಹೂಗಾರ,ಹಾಗೂ ಪಧಾದಿಕಾರಿಗಳು ಉಪಸ್ಥಿತರಿದ್ದರು...

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ