ಅಧಿಕಾರಿಗಳ ನಿರ್ಲಕ್ಷದಿಂದ ಆಕ್ರಮ ಮರಳು ದಂಧೆ ಕೆ ಆರ್ ಎಸ್ ಪಕ್ಷ ಆರೋಪ

 ಅಧಿಕಾರಿಗಳ ನಿರ್ಲಕ್ಷದಿಂದ ಆಕ್ರಮ ಮರಳು ದಂಧೆ    ಕೆ ಆರ್ ಎಸ್ ಪಕ್ಷ ಆರೋಪ




ರಾಯಚೂರು,ಮೇ.16- ಸಿಂಧನೂರು ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ದಂಧೆ ಸರ್ವೇ ಸಾಮಾನ್ಯವಾಗಿದ್ದು  ಇಂತಹ ಅವ್ಯಹರವನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ವಿಫಲ ಆಗಿದ್ದಾರೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪಿಸಿದೆ.                                               ಮರಳು ತಪಸಣ ಕೇಂದ್ರಗಳನ್ನು ತೆರೆಯದ ಕಾರಣದಿಂದ ಆಕ್ರಮ ಮರಳು ಗಣಿಗಾರಿಕೆ ಮಾಲೀಕರು ಯಾವುದೇ ಅಧಿಕಾರಿಯ ಹಾಗೂ ಕಾನೂನಿನ ಭಯವಿಲ್ಲದೆ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪಸಿದ್ದಾರೆ. ಸಿಂಧನೂರು ತಾಲೂಕಿನ ಸುತ್ತ ಮುತ್ತಲ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಇದರ ಭಾಗವಾಗಿ ಇಂದು ಹಾಡ ಹಗಲೇ ಸಿಂಧನೂರು ಮತ್ತು ಒಳಬಳ್ಳಾರಿ ರಸ್ತೆ ಮಾರ್ಗವಾಗಿ ಮರಳುನ್ನ ಸಾಗಿಸುತ್ತಿದ್ದ ಒಂದು ಟ್ರಾಕ್ಟರ್ ಕೆ ಆರ್ ಎಸ್ ಪಕ್ಷಕ್ಕೆ ಸಿಕ್ಕು ಬಿದ್ದಿದೆ ಎಂದು ತಿಳಿಸಿದ್ದಾರೆ.                                            


ರಾಜ್ಯ ಸರ್ಕಾರ ಈಗಾಗಲೇ ಮರಳು ಸಾಗಾಣಿಕೆ ತಡೆಯಲು ವಿಶೇಷ ಅಧಿಕಾರಿಗಳನ್ನು ಹಾಗೂ ತನಿಖಾ ಕೇಂದ್ರಗಳನ್ನು ನಿರ್ಮಿಸಿದೆ ಆದರೆ ಸಿಂಧನೂರು ತಾಲೂಕಿನಲ್ಲಿ ಯಾವುದೇ ಒಂದು ಕಡೆಯಲ್ಲಿ ಚೆಕ್ ಪಾಯಿಂಟ್ ಗಳನ್ನೂ ರಚಿಸಿಲ್ಲ  ಒಂದು ವೇಳೆ ಚೆಕ್ ಪಾಯಿಂಟ್ ಗಳು ಇದ್ದರೂ ಸಹ ಮೇಲಧಿಕಾರಿಗಳ ಸರಿಯಾದ ನಿರ್ವಹಣೆ ಇಲ್ಲದೆ ತಪಾಸಣಾ ಕೇಂದ್ರಗಳು ಪಾಳು ಬಿದ್ದಿರುವ ಉದಾಹರಣೆ ಕಣ್ಣಾರೆ ಕಾಣಬಹುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ  ಸಿಂಧನೂರು ತಾಲೂಕ ಘಟಕ ಆರೋಪಿಸಿದೆ ...

ಸಿಂಧನೂರು ತಾಲೂಕಿನ ಇನ್ನೂ ಹಲವಾರು.  ಸಾರ್ವಜನಿಕ ಕುಂದು ಕೊರತೆಗಳು ಹಾಗೂ ಸಾಮಾಜಿಕ ಸಮಸ್ಯೆಗಳು ರೈತರ, ಸೈನಿಕರ ,ಕೂಲಿ ಕಾರ್ಮಿಕರ ಸಮಸ್ಯೆಗಳು ಇದ್ದು ಇವೆಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಕೆ ಆರ್ ಎಸ್  ಪಕ್ಷ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ. 

ಸಿಂಧನೂರು ತಾಲೂಕಿನಲ್ಲಿ ಸ್ವಚ್ಚ ಪ್ರಾಮಾಣಿಕ  ಪ್ರಾದೇಶಿಕ ಜನಪರ ರಾಜಕಾರಣಕ್ಕೆ ಕೆ ಆರ್ ಎಸ್ ಪಕ್ಷ  ಈಗಾಗಲೇ ಹಲವಾರು ಅಭಿರುದ್ದಿ ಕಾರ್ಯಗಳನ್ನು  ,ಅನ್ಯಾಯ ಆಕ್ರಮ ಬ್ರಷ್ಟ ಅಧಿಕಾರಿ ಮತ್ತು ಇಲಾಖೆಯ ಅವ್ಯವಸ್ಥೆಯನ್ನು ಬಯಲು ಮಾಡುತ್ತಿದೆ  ಎಂದು ಸಿಂಧನೂರು ತಾಲೂಕು ಸಮಿತಿ ತಿಳಿಸಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ