ಏಮ್ಸ್ ಪಡೆಯಲು ನನ್ನದೆ ರೀತಿಯಲ್ಲಿ ಪ್ರಯತ್ನಿಸುವೆ-ಶಂಕರಪಾಟೀಲ ಮುನೇನಕೊಪ್ಪ.
ಏಮ್ಸ್ ಪಡೆಯಲು ನನ್ನದೆ ರೀತಿಯಲ್ಲಿ ಪ್ರಯತ್ನಿಸುವೆ-ಶಂಕರಪಾಟೀಲ ಮುನೇನಕೊಪ್ಪ. ರಾಯಚೂರು,ಮೇ.23-ಏಮ್ಸ್ ಪಡೆಯಲು ನನ್ನದೆ ರೀತಿಯಲ್ಲಿ ಪ್ರಯತ್ನಿಸುವುದಾಗಿ ಜವಳಿ ಹಾಗೂ ಕೈಮಗ್ಗ ,ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ.ಬಿ.ಪಾಟೀಲ ಮುನೇನಕೊಪ್ಪ ಹೇಳಿದರು. ಅವರಿಂದು ನಗರದ ಜಿ.ಪಂ ಸಭಾಂಗಣದಲ್ಲಿ ಕೆಕೆಆರ್ ಡಿಬಿ ಕಾಮಗಾರಿ ಪ್ರಗತಿ ಪರಿಶೀಲನೆ ಹಾಗೂ ಮಳೆ ಹಾನಿ ಕುರಿತು ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಗೆ ಏಮ್ಸ್ ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಟ ಧರಣಿ ಮುಂದುವರೆದ ಬಗ್ಗೆ ಮಾಹಿತಿ ಇದೆ ನಾನು ಸಹ ನನ್ನದೆ ರೀತಿಯಲ್ಲಿ ಏಮ್ಸ್ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದ ಅವರು ಏಮ್ಸ್ ಪಡೆಯಲು ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳ ಸಹಕಾರವಿದ್ದು ಏಮ್ಸ್ ಕುರಿತು ನಮ್ಮನಿರ್ಧಾರ ಅಚಲವಾಗಿದೆ ಎಂದರು.ಜಿಲ್ಲೆಯಲ್ಲಿ 30 ಎಂ.ಎಂ.ಮಳೆಯಿಂದ 55 ಹೆಕ್ಟೇರ್ ವಾಣಿಜ್ಯ ಬೆಳೆ ಹಾಗೂ 40 ಹೆಕ್ಟೇರ್ ತೋಟಗಾರಿಕೆ ಬೆಳೆ , ಮನೆಗಳ, ಹಾನಿಯಾಗಿದ್ದು 30 ಜಾನುವಾರುಗಳು ಸತ್ತಿದ್ದು ಅವುಗಳಿಗೆ ಪರಿಹಾರ ನೀಡಲಾಗುತ್ತಿದ್ದು ಬೆಳೆ ಹಾನಿ ಕುರಿತು ಒಂದು ವಾರದಲ್ಲಿ ಪಾರದರ್ಶಕವಾಗಿ ಸರ್ವೆ ಮಾಡಲು ಸೂಚಿಸಲಾಗಿದೆ ಎಂದರು. ಬೇರೆ ಜಿಲ್ಲೆಗೆ ಹೋಲಿಸಿದರೆ ದೊಡ್ಡ ಮಟ್ಟದ ಹಾನಿಯಾಗಿಲ್ಲ ಲಿಂಗಸ್ಗೂರಲ್ಲಿ ಸಿಡಿಲಿನಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ ಎಂದರು. ಕೆಕೆಆರ್ ಡಿಬಿಯಿಂದ ಕೈಗೊಳ್ಳಲಾದ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಆದೇಶಿಸಿದ್ದೇನೆಂದರು.ಹಣದ ಕೊರತೆಯಿದ್ದರೆ ಜಿಲ್ಲಾಡಳಿತ ಗಮನಕ್ಕೆ ತರಬೇಕೆಂದರು. ಜಿಲ್ಲೆಗೆ ವಿಮಾನ ನಿಲ್ದಾಣಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು.
Comments
Post a Comment