ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಂದ ಜಿಲ್ಲಾ ಪ್ರವಾಸ
ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಂದ ಜಿಲ್ಲಾ ಪ್ರವಾಸ
ರಾಯಚೂರು ಮೇ.18- ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಅವರು ಮೇ.19 ಹಾಗೂ 20ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅವರ ಪ್ರವಾಸದ ವಿವರ ಇಂತಿದೆ. ಅವರು ಮೇ.19ರ ಗುರುವಾರ ಬೆಳಿಗ್ಗೆ 10.30ಗಂಟೆಗೆ ಜಿಲ್ಲೆಗೆ ಆಗಮಿಸಿ ರಾಯಚೂರಿನಿಂದ ಮಂತ್ರಾಲಯಕ್ಕೆ ಭೇಟಿ ನೀಡಿ ಪೂಜ್ಯ ರಾಯರ ದರ್ಶನ ಪಡೆಯಲಿದ್ದಾರೆ.
ಸಂಜೆ 6.30ಕ್ಕೆ ಮಾನ್ವಿ, ಸಿರವಾರ ಹಾಗೂ ದೇವದುರ್ಗ ತಾಲೂಕಿನ ಅಲೆಮಾರಿ ಕುಟುಂಬಗಳ ಭೇಟಿ ಹಾಗೂ ಅಲೆಮಾರಿ ಸಮಾಜದವರೊಂದಿಗೆ ಸಮಾಲೋಚನೆ. ರಾತ್ರಿ 8.30ಗಂಟೆಗೆ ರಾಯಚೂರಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮೇ.20ರ ಶುಕ್ರವಾರ ಬೆಳಿಗ್ಗೆ 10.30ಗಂಟೆಗೆ ಜಿಲ್ಲಾ ಕಚೇರಿಗೆ ಭೇಟಿ, ಪ್ರಗತಿ ಪರಿಶೀಲನೆ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಬೆಳಿಗ್ಗೆ 11ಗಂಟೆಗೆ ಸಿಂಧನೂರು ಗ್ರಾಮದ ಅಲೆಮಾರಿ ಕುಟುಂಬಗಳ ಭೇಟಿ ಹಾಗೂ ಅಲೆಮಾರಿ ಸಮಾಜದವರೊಂದಿಗೆ ಸಮಾಲೋಚನೆ ನಡೆಸಿ, ಮಧ್ಯಾಹ್ನ 12.30ಗಂಟೆಗೆ ಸಿಂಧನೂರಿನಿAದ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment