ನಗರದಲ್ಲಿ ಮಳೆ ಆರ್ಭಟ
ನಗರದಲ್ಲಿ ಮಳೆ ಆರ್ಭಟ ರಾಯಚೂರು,ಮೇ.18-ನಗರದಲ್ಲಿ ಇಂದು ಸಹ ಮಳೆ ಆರ್ಭಟ ಮುಂದುವರೆದಿದ್ದು ಗುಡಗು,ಮಿಂಚು ಹಾಗೂ ಸಿಡಿಲಿನೊಂದಿಗೆ ಮಳೆ ಆರ್ಭಟ ಶುರುವಾಗಿದೆ. ಬಿರು ಬಿಸಿಲಿನಿಂದ ಕಂಗೆಟ್ಟ ಜನತೆಗೆ ಮುಂಗಾರು ಪೂರ್ವ ಮಳೆ ಆಗಮನದಿಂದ ಬಿಸಿಲಿನ ಬೇಗೆಯಿಂದ ಕೊಂಚ ನಿರಾಳತೆ ಸಿಕ್ಕಂತಾಗಿದೆ. ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದೆ ನಗರದಲ್ಲಿಯೂ ಸಹ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿವೆ.ರಾಜಾ ಕಾಲುವೆ ಸ್ವಚ್ಚತೆ ಕಾರ್ಯವನ್ನು ನಗರಸಭೆ ಕೈಗೊಂಡಿದ್ದು ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತಿದೆ ಎಂದು ಜನರ ಮಾತಾಗಿದೆ.ಅವೈಜ್ಞಾನಿಕ ಯೋಜನೆಗಳಿಂದ ಮಳೆ ನೀರು ಮನೆಗಳಿಗೆ ನುಗ್ಗುವುದು ಪ್ರತಿ ವರ್ಷ ಕಾಣುತ್ತೇವೆ ಮಳೆಗಾಲ ಬಂತೆಂದರೆ ಜನರು ಬವಣೆ ಅನುಭವಿಸುವುದಂತು ತಪ್ಪುವುದಿಲ್ಲ.
Comments
Post a Comment