ಧಾರವಾಡ ನುಗ್ಗೀಕೆರಿ ಹನುಮಂತ ದೇವಸ್ಥಾನಕ್ಕೆ ಭಕ್ತರ ದಂಡು
ಧಾರವಾಡ ನುಗ್ಗೀಕೆರಿ ಹನುಮಂತ ದೇವಸ್ಥಾನಕ್ಕೆ ಭಕ್ತರ ದಂಡು. ಧಾರವಾಡ,ಮೇ.28-ಧಾರವಾಡದ ಸುಪ್ರಸಿದ್ಧ ನುಗ್ಗೀಕೇರಿ ಶ್ರೀ ಹನುಮಂತನ ದೇವಸ್ಥಾನಕ್ಕೆ ಶನಿವಾರ ಹಿನ್ನಲೆ ಭಕ್ತರು ಹರಿದು ಬರುತ್ತಿದ್ದು ದೇವಸ್ಥಾನ ತುಂಬಿ ತುಳುಕುತ್ತಿದೆ. ಧಾರವಾಡ ಬಸ್ ನಿಲ್ದಾಣದಿಂದ ಸುಮಾರು 6 ಕಿ.ಮಿ ಅಂತರದಲ್ಲಿ ಕಲಘಟಗಿ ಮುಖ್ಯ ರಸ್ತೆಯಲ್ಲಿ ಅರ್ಧ ಕಿ.ಮಿ ಕಾಲ್ನಡಿಗೆಯಲ್ಲಿ ಸಾಗಿದರೆ ಸುಂದರ ವಿಶಾಲ ಪರಿಸರದಲ್ಲಿ ಹರಡಿಕೊಂಡಿರುವ ಕೆರೆ ದಡದಲ್ಲಿ ನೆಲೆಸಿರುವ ಹನುಮಂತ ದೇವರು ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ ಈ ಭಾಗದ ಆರಾಧ್ಯ ದೈವವಾಗಿದ್ದು ಹನುಮನ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಾರೆ.ದೇವಸ್ಥಾನ ಸಮಿತಿ ಭಕ್ತರಿಗೆ ಸುಲಲಿತವಾಗಿ ದರ್ಶನವಾಗುವ ಹಾಗೆ ವ್ಯವಸ್ಥೆ ಕಲ್ಪಿಸುತ್ತಾರೆ. ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಇತ್ತೀಚೆಗೆ ಅನ್ಯಕೋಮಿನ ಜನರು ಇಲ್ಲಿ ಟೆಂಗಿನಕಾಯಿ, ಹಣ್ಣು ಮಾರಾಟ ಮಾಡುತ್ತಾರೆ ಅದನ್ನು ಹಿಂದು ಪರ ಸಂಘಟನೆಗಳು ವಿರೋಧಿಸಿದ್ದ ಪರಿಣಾಮ ಬಿಗಿವಿನ ವಾತಾವರಣ ಅಂದು ಕಂಡುಬಂದ ಹಿನ್ನಲೆ ಈಗಲೂ ಪೊಲೀಸ್ ಸಿಬ್ಬಂದಿ ಇಲ್ಲಿ ಮೋಕ್ಕಾಂ ಹೂಡಿದ್ದಾರೆ.
Comments
Post a Comment