ಹುಬ್ಬಳ್ಳಿಯ ದುರ್ಗದಬೈಲ್ ಗಿರ್ಮಿಟ್ ಮಂಡಕ್ಕಿ ಬಹಳ ಫೇಮಸ್

 ಹುಬ್ಬಳ್ಳಿಯ  ದುರ್ಗದಬೈಲ್ ಗಿರ್ಮಿಟ್ ಮಂಡಕ್ಕಿ ಬಹಳ ಫೇಮಸ್.                                            ಹುಬ್ಬಳ್ಳಿ,ಮೇ.28- ಗಂಡು ಮೆಟ್ಟಿದ ನಾಡು ,ಛೋಟಾ ಮುಂಬೈ, ವಾಣಿಜ್ಯನಗರಿ ಹುಬ್ಬಳ್ಳಿ ಬಗ್ಗೆ ಎಲ್ಲರೂ ಕೇಳಿರುತ್ತಾರೆ ಬಹುತೇಕ ಜನರು ಹುಬ್ಬಳ್ಳಿ ನೋಡಿರುತ್ತಾರೆ ಹುಬ್ಬಳ್ಳಿ ನೋಡಿದ ಅನೇಕರು ಹುಬ್ಬಳ್ಳಿ ನಗರದ ಪ್ರಮುಖ ಮಾರುಕಟ್ಟೆ ಜನ ನಿಬಿಡ ಪ್ರದೇಶವಾದ ದುರ್ಗದಬೈಲು ನೋಡಿರುತ್ತಾರೆ.ಇಲ್ಲಿ ಬಟ್ಟೆ, ಪಾತ್ರೆ,ಮೋಬೈಲ್, ಎಲೆಕ್ಟ್ರಾನಿಕ್ಸ್,ಸ್ಟೇಷನರಿ,ಸಿಹಿ ತಿಂಡಿಗಳ ಅಂಗಡಿ, ಇನ್ನೂ ಅನೇಕ ಮಳಿಗೆಗಳು ಉಂಟು ನೀವು ಇದರಲ್ಲೇನಿದೆ... ಮಾರುಕಟ್ಟೆ ಅಂದ ಮೇಲೆ ಇದೆಲ್ಲ ಸಾಮಾನ್ಯವೆಂದು ಕೇಳಬಹುದು ಆದರೆ ಈ ಸ್ದಳದಲ್ಲಿ ಮತ್ತೊಂದು ವಿಶೇಷತೆಯಿದೆ ಇಲ್ಲಿ ಸಾಯಿಂಕಾಲವಾದರೆ ತಿಂಡಿ, ತಿನಸುಗಳ ಲೋಕವೆ ತೆರೆದುಕೊಳ್ಳುತ್ತೆ ಅದರಲ್ಲಿ ವಿಶೇಷವಾಗಿ ಉತ್ತರ  ಕರ್ನಾಟಕದ ಗಿರ್ಮಿಟ್ ಸಿಗುತ್ತದೆ ಅಲ್ಲಿ ದೊರೆಯುವ ಗಿರ್ಮಿಟ್ ಗೆ ಭಾರಿ ಡಿಮ್ಯಾಂಡ್ ಇದೆ ಪ್ರಭಯ್ಯ ಎನ್ನುವವರು ಗಿರ್ಮಿಟ್ ಮಾಂತ್ರಿಕ ಎಂದರೆ ಅತಶಯೋಕ್ತಿ ಆಗಲಾರದು.                         ಪ್ರಭಯ್ಯ  1966 ರಲ್ಲಿ ತಮ್ಮ ತಾತಂದಿರ, ತಂದೆ  ಕಾಲದಿಂದಲು ನಡೆಸಿಕೊಂಡು ಬಂದ ಗಿರ್ಮಿಟ ಅಂಗಡಿ ನಡೆಸುತ್ತಿದ್ದು ಜನರು ಇವರ ಅಂಗಡಿಯನ್ನೆ ಹುಡುಕಿಕೊಂಡು ಬಂದು ಗಿರ್ಮಿಟ್ ಸವಿಯುತ್ತಾರೆ ಅಬಾಲ ವೃದ್ದರಾದಿಯಾಗಿ ಗಿರ್ಮಿಟ್ ತಿನ್ನಲು ಜನ ಜಂಗುಳಿ ಸೇರಿರುತ್ತದೆ ರುಚಿ ಶುಚಿಗೆ ರಾಜಿಯಾಗದೆ ಗಿರ್ಮಿಟ್ ಮಾಡುವ ಇವರು ಬಹಳ ಫೇಮಸ್ ಆಗಿದ್ದಾರೆ ಗಿರ್ಮಿಟ್ ಒಂದು ಪ್ಲೇಟ್ ಗೆ 30 ರೂಪಾಯಿ.  ದರ ನಿಗದಿ  ಮಾಡಿದ್ದಾರೆ. ನೀವು ಒಮ್ಮೆ ಹುಬ್ಬಳ್ಳಿಗೆ ಬಂದರೆ ದುರ್ಗದ ಬೈಲ್ನಲ್ಲಿ ಸಾಯುಂಕಾಲ ಮಾತ್ರ ದೊರೆಯುವ ಪ್ರಭಯ್ಯ ರವರ ಗಿರ್ಮಿಟ್ ಸವಿಯುವುದನ್ನು ಮರೆಯಬೇಡಿ...

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್