ದಾಸ ಸಾಹಿತ್ಯ ಮೌಲಿಕ ಸಾಹಿತ್ಯ ಇಂದಿಗೂ ಎಂದಿಗೂ ಪ್ರಸ್ತುತ- ಸುಸ್ವರಂ ನಾಗರಾಜ್ ಆಚಾರ್ಯ

ದಾಸ ಸಾಹಿತ್ಯ ಮೌಲಿಕ ಸಾಹಿತ್ಯ ಇಂದಿಗೂ ಎಂದಿಗೂ ಪ್ರಸ್ತುತ- ಸುಸ್ವರಂ ನಾಗರಾಜ್ ಆಚಾರ್ಯ

ರಾಯಚೂರು,ಮೇ.23- ದಾಸ ಸಾಹಿತ್ಯವೆಂದರೆ ಅನುಭವದ ಅಡುಗೆ, ಭಕ್ತಿಯ ಕಣಜ, ಪರಮಾತ್ಮನ ಸನ್ನಿಧಾನ, ನೊಂದವರ ಭರವಸೆ, ಹಾಗೂ ಪ್ರೀತಿ ಪ್ರೇಮ ವಿಶ್ವಾಸ ನಡೆ-ನುಡಿ ಹಾಗೂ ಸತ್ಯವಾದ ಮಾತುಗಳನ್ನು ಹೇಳುವ ಸಾಹಿತ್ಯವೇ ದಾಸಸಾಹಿತ್ಯ ಇದು ಇಂದಿಗೂ ಪ್ರಸ್ತುತವಾಗಿದೆ,  ಜೀವನದಲ್ಲಿ ಸಾಮಾಜಿಕ ಮೌಲ್ಯ ಬಿಂಬಿಸುತ್ತದೆ ಎಂದು ಖ್ಯಾತ ವಾಗ್ಮಿಗಳು, ದಾಸ ಸಾಹಿತ್ಯ ವಿದ್ವಾಂಸರಾದ ಶ್ರೀ ಸುಸ್ವರಂ ನಾಗರಾಜಾಚಾರ ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದರು.

   ನಿನ್ನೆ ನಗರದ ಜವಾಹರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯಚೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಹಮ್ಮಿಕೊಂಡ  *ದಾಸ ವೈಭವ* ಕಾರ್ಯಕ್ರಮದಲ್ಲಿ ದಾಸಸಾಹಿತ್ಯದ 'ಸಾಮಾಜಿಕ ಕಳಕಳಿ' ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.


 ಕನಕದಾಸರ ಸಾಹಿತ್ಯವನ್ನು ತಿಳಿದಲ್ಲಿ ಸದೃಢ ಸಮಾಜದೊಂದಿಗೆ ವ್ಯಕ್ತಿಯು ಸಹ ಆರೋಗ್ಯವಂತನಾಗುತ್ತಾನೆ ಎಂದರು.

        ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಂಗಣ್ಣ ಪಾಟೀಲ್ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಅವರು ಮಾತನಾಡಿ ರಾಯಚೂರು ದಾಸ ಸಾಹಿತ್ಯದ ತವರೂರು ಈ ಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಾಸಸಾಹಿತ್ಯದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.

    ಈ ಸಂದರ್ಭದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಠದ ಸಂಸ್ಕೃತ ವಿದ್ಯಾಪೀಠದ ಅಧ್ಯಾಪಕರಾದ ಪಂ. ದ್ವಾರಕನಾಥ ಆಚಾರ್ ಮಾತನಾಡಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ರಾಯಚೂರಿನಲ್ಲಿ ದಾಸ ಸಾಹಿತ್ಯದ ಕುರಿತಾದ ಕಾರ್ಯಕ್ರಮವನ್ನು ಕಾಳಜಿಯಿಂದ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ತಾ.ಕಸಾಪ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ ಅವರು ಶ್ರೀರಾಘವೇಂದ್ರಸ್ವಾಮಿಗಳ ಮಠದ ಸಹಕಾರದೊಂದಿಗೆ ಸಾಹಿತ್ಯ ಪರಿಷತ್ತಿನ ಹಾಗೂ ದಾಸ ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

     ಈ ಸಂದರ್ಭದಲ್ಲಿ ಶ್ರೀ ದಿ.ಕೆ ಜಯಾಚಾರ್ಯ ಕೊಪ್ಪರ ಇವರ ಸ್ಮರಣಾರ್ಥ ದತ್ತಿಪ್ರಶಸ್ತಿಯನ್ನು ದಾಸಸಾಹಿತ್ಯದ ಸಾಧಕರಾದ ಬಿ. ನರಸಿಂಗರಾವ್ ಬ್ಯಾಂಕ್, ಗುತ್ತಲ ರವೀಂದ್ರನಾಥ ಇವರಿಗೆ ನೀಡಿ ಗೌರವಿಸಲಾಯಿತು.

      ದತ್ತಿ ದಾನಿಗಳಾದ ಜಯಲಕ್ಷ್ಮಿ ಮಂಗಳಮೂರ್ತಿ ( ಕೆ.ದಿ. ಜಯಾಚಾರ್ಯ ಕೊಪ್ಪರ ಸ್ಮರಣಾರ್ಥ  ದತ್ತಿ)  ಡಾ ರಾಜೇಂದ್ರ ಕುಮಾರ (ದಿ.ಮಂದಾಕಿನಿಬಾಯಿ ನರಸಿಂಗರಾವ್ ಸ್ಮರಣಾರ್ಥ ದತ್ತಿ) ಶ್ರೀ ಸದಾನಂದ ಪ್ರಭು ( ಶ್ರೀ ನರಸಿಂಹ ಪ್ರಭು ಇವರ ಸ್ಮರಣಾರ್ಥ ದತ್ತಿ) ಶ್ರೀ ಪ್ರಹ್ಲಾದಾ ಚಾರ್ಯ ಜೋಶಿ ಇವರ ಸ್ಮರಣಾರ್ಥ ದತ್ತಿ  ಇವರುಗಳಿಗೆ ವೇದಿಕೆಯ ಮೇಲೆ ಸನ್ಮಾನಿಸಿ ಅಭಿನಂದಿಸಲಾಯಿತು.

     ಕಾರ್ಯಕ್ರಮದಲ್ಲಿ ಶ್ರೀನರಸಿಂಗರಾವ ದೇಶಪಾಂಡೆ ವಲಯ ಉಪಾಧ್ಯಕ್ಷರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವೇದಿಕೆ ಮೇಲೆ ಉಪಸ್ಥಿತರಿದ್ದರು.

  ಕಾರ್ಯಕ್ರಮವು ಶ್ರೀ ಕೃಷ್ಣ ಸಂಗೀತ ವಿದ್ಯಾಲಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾರ್ಯದರ್ಶಿ ರಾವುತರಾವ್ ಬರೂರ್ ಸ್ವಾಗತಿಸಿದರು. ಡಾ.ವೆಂಕಟೇಶ ನವಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.                                                                                                                         

  ಮುರಳಿಧರ ಕುಲಕರ್ಣಿ ನಿರೂಪಿಸಿದರು.ಕಾರ್ಯದರ್ಶಿ  ಆಂಜನೇಯ ಕಾವಲಿ ವಂದಿಸಿದರು. 

  ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷ ರುದ್ರಯ್ಯ ಗುಣಾರಿ, ವೀರಹನುಮಾನ್, ಆಂಜನೇಯ ಜಾಲಿಬೆಂಚಿ, ದಂಡಪ್ಪ ಬಿರಾದಾರ್, ಗುರುರಾಜಾಚಾರ್ಯ ತಾಳಿಕೋಟಿ, ಶ್ರೀಮತಿ ರೇಖಾ ಬಡಿಗೇರ, ಡಾ. ಶೀಲಾದಾಸ, ಸತ್ಯನಾರಾಯಣ ಮುಜುಂದಾರ್, ಡಾ. ಅರುಣಾ ಹಿರೇಮಠ, ವಸುಧೇಂದ್ರಸಿರವಾರ, ವಿಷ್ಣು ತೀರ್ಥ,ಪ್ರಸನ್ನ, ರಾಜಾಶಂಕರ್, ರೇಖಾ ಪಾಟೀಲ,ಸಣ್ಣ ಪ್ಯಾಟಪ್ಪ ಡಯಟ್ ಉಪನ್ಯಾಸಕರು ಮುಂತಾದವರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ